ಕಾಪು : ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಕಟ್ಟಿಕೆರೆ ಬಳಿ ನ್ಯಾನೊ ಕಾರು ಮತ್ತು ಡಸ್ಟರ್ ಕಾರು ಪರಸ್ಪರ ಢಿಕ್ಕಿ ಹೊಡೆದುಕೊಂಡು ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು ನಾಲ್ಕು ಮಂದಿ ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ನ್ಯಾನೋ ಕಾರಿನ ಚಾಲಕ, ಮಜೂರು ಚಂದ್ರನಗರದ ಸಂಬಂಧಿಕರ ಮನೆಗೆ ಆಗಮಿಸುತ್ತಿದ್ದ ಕೊಪ್ಪ ಮೂಲದ ಮುನ್ನ ಯಾನೆ ಇಮ್ತಿಯಾಜ್ (40) ಮೃತ ಪಟ್ಟಿದ್ದು ಶೈನಾಜ್ (31) ತಾಹಿರಾ (38), ಶಮ್ನಾ (6) ಗಾಯಾಳುಗಳು.
ಉಡುಪಿಯಿಂದ ಕಾಪುವಿನತ್ತ ಆಗಮಿಸುತ್ತಿದ್ದ ನ್ಯಾನೋ ಕಾರಿಗೆ, ಹಿಂದಿನಿಂದ ಬಂದ ಡಸ್ಟರ್ ಕಾರು ಢಿಕ್ಕಿ ಹೊಡೆದಿದೆ. ಡಸ್ಟರ್ ಕಾರು ಢಿಕ್ಕಿ ಹೊಡೆದ ರಭಸಕ್ಕೆ ನ್ಯಾನೋ ಕಾರು ರಸ್ತೆ ಬದಿಯಲ್ಲಿದ್ದ ಲೈಟ್ ಕಂಬಕ್ಕೆ ಢಿಕ್ಕಿಯಾಗಿ ಪಲ್ಟಿಯಾಗಿದ್ದು, ಡಸ್ಟರ್ ಕಾರು ರಸ್ತೆಯಲ್ಲೇ ಮಗುಚಿ ಬಿದ್ದಿತ್ತು.
ನ್ಯಾನೋ ಕಾರಿನಲ್ಲಿದ್ದ ಇಮ್ತಿಯಾಜ್ ಸಹಿತ ನಾಲ್ಕು ಮಂದಿಗೆ ಪೆಟ್ಟಾಗಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳ ಪೈಕಿ ಇಮ್ತಿಯಾಜ್ ಅವರಿಗೆ ತೀವ್ರ ಏಟಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಸ್ಟರ್ ಕಾರಿನ ಚಾಲಕ ಸುರೇಶ್ ಶೆಟ್ಟಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Related Articles
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: 1990ರಲ್ಲಿ ನಡೆದ Mirwaiz Farooq ಹತ್ಯೆ ಪ್ರಕರಣ: 30 ವರ್ಷಗಳ ಬಳಿಕ ಇಬ್ಬರು ಉಗ್ರರ ಸೆರೆ