ಕಾಪು : ಪಾಂಗಾಳದಲ್ಲಿ ರವಿವಾರ ಹತ್ಯೆಯಾದ ಶರತ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ.
ಕಾರ್ಕಳ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ಅವರು ಕಾಪುವಿನಲ್ಲೇ ಠಿಕಾಣಿ ಹೂಡಿ ತನಿಖಾಧಿಕಾರಿ ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ ಮತ್ತವರ ತಂಡಕ್ಕೆ ನಿರ್ದೇಶನ ನೀಡುತ್ತಿದ್ದಾರೆ. ಶರತ್ ನಡೆಸುತ್ತಿದ್ದ ಭೂ ವ್ಯವಹಾರ, ಹಣದ ವಿಚಾರಕ್ಕೆ ಸಂಬಂಧಿಸಿದ ಪರಿಚಿತರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಆರೋಪಿಗಳು ನಾಲ್ವರಿದ್ದರು ಎನ್ನ ಲಾಗುತ್ತಿದ್ದು, ಮಾರಕಾಯುಧ ವನ್ನು ಹಿಡಿದುಕೊಂಡು ಪೂರ್ವ ನಿರ್ಧರಿತವಾಗಿ ಯೋಜನೆ ಹಾಕಿ ಕೊಂಡೇ ಹತ್ಯೆ ನಡೆಸಲಾಗಿರು ವುದು ಸಿಸಿ ಕೆಮರಾದಲ್ಲಿ ದಾಖಲಾದ ವೀಡಿಯೋದಿಂದ ತಿಳಿದುಬರುತ್ತಿದೆ.