Advertisement

Pangala: ಮೆಹೆಂದಿಗೆ ತೆರಳುತ್ತಿದ್ದ ದಂಪತಿಗೆ ಬೈಕ್‌ ಢಿಕ್ಕಿ ; ಮಹಿಳೆ ಸಾವು

10:27 PM Nov 18, 2023 | Team Udayavani |

ಕಾಪು: ಸಂಬಂಧಿಕರ ಮನೆಗೆ ಮೆಹಂದಿ ಕಾರ್ಯಕ್ರಮಕ್ಕೆ ತೆರಳಲು ರಸ್ತೆ ದಾಟುತ್ತಿದ್ದ ದಂಪತಿಗೆ ಬೈಕ್‌ ಢಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ರಾ. ಹೆ. 66ರ ಪಾಂಗಾಳ ಪೆಟ್ರೋಲ್‌ ಬಂಕ್‌ ಬಳಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ಪಾಂಗಾಳ ಸದಾಡಿ ಪಡುಮನೆ ಶೇಖರ್‌ ಶೆಟ್ಟಿ ಅವರ ಪತ್ನಿ ವಿಜಯಾ ಶೆಟ್ಟಿ (61) ಮೃತರು.
ಬೈಕ್‌ ಢಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡರು. ಸ್ಥಳೀಯರು ಕೂಡಲೇ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ವಿಜಯಾ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಶೇಖರ್‌ ಶೆಟ್ಟಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರು ಪತಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದುಕೊಂಡು ಹೋಗಬಹುದಿತ್ತು ?
ತಮ್ಮ ಮನೆಗಿಂತ ಕೆಲವೇ ದೂರದಲ್ಲಿ ನಡೆಯುವ ಮೆಹಂದಿ ಕಾರ್ಯಕ್ರಮದಲ್ಲಿ ದಂಪತಿ ಪಾಲ್ಗೊಳ್ಳಬೇಕಿತ್ತು. ಆದರೆ ಕತ್ತಲಿನಲ್ಲಿ ಗದ್ದೆಗಳನ್ನು ದಾಟಿಕೊಂಡು ಹೋಗುವುದನ್ನು ತಪ್ಪಿಸಲು ಸಂಬಂಧಿಯೊಬ್ಬರ ಜತೆಗೆ ರಿಕ್ಷಾದಲ್ಲಿ ಹೆದ್ದಾರಿಯವರೆಗೆ ತೆರಳಿ, ಅಲ್ಲಿಂದ ಹೆದ್ದಾರಿ ದಾಟಲು ಪ್ರಯತ್ನಿಸಿದಾಗ ಈ ಅಪಘಾತ ಸಂಭವಿಸಿತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next