Advertisement

ನ್ಯೂಜಿಲ್ಯಾಂಡ್‌ ನೆಲದಲ್ಲಿ ಟಿ20 ಸರಣಿ ಗೆಲುವಿನ ಕಾತರದಲ್ಲಿ ಪಾಂಡ್ಯ ಬಳಗ

10:41 PM Nov 21, 2022 | Team Udayavani |

ನೇಪಿಯರ್‌: ಮೌಂಟ್‌ ಮೌಂಗನಿಯಲ್ಲಿ ರನ್‌ ಎವರೆಸ್ಟ್‌ ಏರಿ ಜಯಭೇರಿ ಮೊಳಗಿಸಿದ್ದ ಹಾರ್ದಿಕ್‌ ಪಾಂಡ್ಯ ಸಾರಥ್ಯದ ಭಾರತವೀಗ ನ್ಯೂಜಿಲ್ಯಾಂಡ್‌ ವಿರುದ್ಧ ಅವರದೇ ನೆಲದಲ್ಲಿ ಟಿ20 ಸರಣಿ ಗೆಲುವಿನ ಹೊಸ್ತಿಲಲ್ಲಿ ನಿಂತಿದೆ. ಮಂಗಳವಾರ ನೇಪಿಯರ್‌ನಲ್ಲಿ 3ನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ನಡೆಯಲಿದ್ದು, ಟೀಮ್‌ ಇಂಡಿಯಾ ಹೊಸ ಸ್ಫೂರ್ತಿಯೊಂದಿಗೆ ಕಣಕ್ಕಿಳಿಯಲಿದೆ.

Advertisement

ಇನ್ನೊಂದೆಡೆ ನ್ಯೂಜಿಲ್ಯಾಂಡ್‌ ಅಷ್ಟೇ ಒತ್ತಡದಲ್ಲಿದೆ. ಸರಣಿಯನ್ನು ಸಮಬಲಕ್ಕೆ ತರಬೇಕಾದರೆ ಅದು ಗೆಲ್ಲಲೇಬೇಕಿದೆ. ತಂಡದ ಬಿಗ್‌ ಹಿಟ್ಟರ್‌ಗಳೆಲ್ಲ ಸಿಡಿದರಷ್ಟೇ ಕಿವೀಸ್‌ ದೊಡ್ಡ ಅವಮಾನದಿಂದ ಪಾರಾದೀತು ಎಂಬುದು ಸದ್ಯದ ಸ್ಥಿತಿ.

ಸೂರ್ಯ ಸಿಡಿಯದೇ ಹೋಗಿದ್ದರೆ…
ರವಿವಾರದ ದ್ವಿತೀಯ ಟಿ20 ಪಂದ್ಯ ದಲ್ಲಿ ಭಾರತದ ಬ್ಯಾಟಿಂಗ್‌ ಹೀರೋ ಎನಿಸಿಕೊಂಡು ಮೆರೆದಾಡಿದವರು ಸೂರ್ಯಕುಮಾರ್‌ ಯಾದವ್‌. ಅವರ ಅಜೇಯ ಶತಕದಿಂದ ಟೀಮ್‌ ಇಂಡಿಯಾ ಬೃಹತ್‌ ಮೊತ್ತ ದಾಖಲಿ ಸುವಲ್ಲಿ ಯಶಸ್ವಿಯಾಗಿತ್ತು. ಸೂರ್ಯ ಹೊರತುಪಡಿಸಿದರೆ ಬ್ಯಾಟಿಂಗ್‌ ಸರದಿ ಯಲ್ಲಿ ಗಮನ ಸೆಳೆದವರು 36 ರನ್‌ ಮಾಡಿದ ಇಶಾನ್‌ ಕಿಶನ್‌ ಮಾತ್ರ. ಉಳಿದೆಲ್ಲರದೂ ಕಳಪೆ ನಿರ್ವಹಣೆ ಎಂಬುದನ್ನು ಮರೆಯುವಂತಿಲ್ಲ.

ಆರಂಭಿಕನಾಗಿ ಇಳಿದ ರಿಷಭ್‌ ಪಂತ್‌ 6 ರನ್‌, ಮಧ್ಯಮ ಕ್ರಮಾಂಕದಲ್ಲಿ ಆಡಿದ ಶ್ರೇಯಸ್‌ ಅಯ್ಯರ್‌, ನಾಯಕ ಹಾರ್ದಿಕ್‌ ಪಾಂಡ್ಯ ತಲಾ 13 ರನ್‌ ಮಾಡಿ ಆಟ ಮುಗಿಸಿದರು. ದೀಪಕ್‌ ಹೂಡಾ, ವಾಷಿಂಗ್ಟನ್‌ ಸುಂದರ್‌ ಖಾತೆ ತೆರೆಯದೆ ಟಿಮ್‌ ಸೌಥಿಗೆ ಹ್ಯಾಟ್ರಿಕ್‌ ಒಪ್ಪಿಸಿ ಹೋದರು. ಸೂರ್ಯಕುಮಾರ್‌ ಸಿಡಿಯದೇ ಹೋಗಿದ್ದರೆ ಭಾರತದ ಕತೆ ಏನಾಗುತ್ತಿತ್ತು ಎಂಬುದು ಇಲ್ಲಿನ ಪ್ರಶ್ನೆ.

ದೊಡ್ಡ ಬದಲಾವಣೆ ಅನುಮಾನ
ಅಂದಮಾತ್ರಕ್ಕೆ ಅಂತಿಮ ಪಂದ್ಯ ಕ್ಕಾಗಿ ಭಾರತ ದೊಡ್ಡ ಮಟ್ಟದ ಬದಲಾವಣೆ ಯನ್ನೇನೂ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. “ಬದಲಾವಣೆ ಕುರಿತು ನನ ಗೇನೂ ತಿಳಿದಿಲ್ಲ. ಎಲ್ಲರಿಗೂ ಅವಕಾಶ ನೀಡಬೇಕೆಂಬುದು ನನ್ನ ಉದ್ದೇಶ. ಆದರೆ ಉಳಿದಿರು ವುದು ಒಂದು ಪಂದ್ಯ ಮಾತ್ರ. ಹೀಗಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸುವುದು ಸ್ವಲ್ಪ ಕಷ್ಟ’ ಎಂಬುದು ನಾಯಕ ಹಾರ್ದಿಕ್‌ ಪಾಂಡ್ಯ ಹೇಳಿಕೆ.

Advertisement

ಒಂದು ವೇಳೆ ತಂಡದಲ್ಲಿ ಪರಿವ ರ್ತನೆ ಮಾಡುವುದಾದರೆ ರೇಸ್‌ನಲ್ಲಿರುವವರು ಓಪನರ್‌ ಶುಭಮನ್‌ ಗಿಲ್‌, ಹಾರ್ಡ್‌ ಹಿಟ್ಟಿಂಗ್‌ ಬ್ಯಾಟರ್‌ ಕಂ ಕೀಪರ್‌ ಸಂಜು ಸ್ಯಾಮ್ಸನ್‌, ವೇಗಿ ಉಮ್ರಾನ್‌ ಮಲಿಕ್‌ ಮತ್ತು ಸ್ಪಿನ್ನರ್‌ ಕುಲದೀಪ್‌ ಯಾದವ್‌.

ಒಂದು ಸಾಧ್ಯತೆಯಂತೆ ಗಿಲ್‌ ಅವ ರನ್ನು ದ್ವಿತೀಯ ಪಂದ್ಯದಲ್ಲೇ ಆರಂಭಿಕ ನನ್ನಾಗಿ ಇಳಿಸಬೇಕಿತ್ತು. ಆದರೆ ಇಲ್ಲಿ ಇಬ್ಬರೂ ಎಡಗೈ ಆಟಗಾರರರೇ ಕಾಣಿಸಿ ಕೊಂಡರು. ಇಶಾನ್‌ ಕಿಶನ್‌ ಅವರಿಗೆ ರಿಷಭ್‌ ಪಂತ್‌ ಜೋಡಿಯಾದರು. ಇವರಲ್ಲಿ ಪಂತ್‌ ಕ್ಲಿಕ್‌ ಆಗಲಿಲ್ಲ. ಆದರೂ ಓಪನಿಂಗ್‌ನಲ್ಲಿ ಬದಲಾವಣೆ ಅನುಮಾನ.

ಉಳಿದಂತೆ ಭಾರತದ ಬೌಲಿಂಗ್‌ ಹರಿತವಾಗಿಯೇ ಇತ್ತು. ಭುವನೇಶ್ವರ್‌, ಸಿರಾಜ್‌, ಹೂಡಾ, ಚಹಲ್‌ ಸೇರಿ ಕೊಂಡು ನ್ಯೂಜಿಲ್ಯಾಂಡ್‌ನ‌ ಹಾರ್ಡ್‌ ಹಿಟ್ಟರ್‌ಗಳ ಸದ್ದಡಗಿಸಿದ್ದರು. ಅರ್ಷ ದೀಪ್‌ ವಿಕೆಟ್‌ ಲೆಸ್‌ ಎನಿಸಿದರೂ ಅಮೋಘ ಕ್ಷೇತ್ರರಕ್ಷಣೆ ಮೂಲಕ ಗೆಲುವಿನ ಹೀರೋ ಎನಿಸಿದ್ದರು. ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಎರಡೂ ವಿಭಾಗಗಳಲ್ಲಿ ವೈಫ‌ಲ್ಯ ಕಂಡರೂ ಇನ್ನೊಂದು ಅವಕಾಶ ಸಿಗುವ ಸಾಧ್ಯತೆಯಂತೂ ಇದೆ.

ನಾಯಕ ವಿಲಿಯಮ್ಸನ್‌ ಗೈರು
ಬ್ಲ್ಯಾಕ್‌ ಕ್ಯಾಪ್ಸ್‌ ಪಡೆ ನಾಯಕ ಕೇನ್‌ ವಿಲಿಯಮ್ಸನ್‌ ಗೈರಲ್ಲಿ ಕಣಕ್ಕಿಳಿಯುತ್ತಿದೆ. ಇದು ತಂಡದ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ. ಕಳೆದ ಪಂದ್ಯದಲ್ಲಿ ಭಾರತದ ದಾಳಿಯನ್ನು ಎದುರಿಸಿ ನಿಂತದ್ದು ವಿಲಿಯಮ್ಸನ್‌ ಮಾತ್ರ. ಹ್ಯಾಟ್ರಿಕ್‌ ಹೀರೋ ಟಿಮ್‌ ಸೌಥಿ ತಂಡವನ್ನು ಮುನ್ನಡೆಸಲಿದ್ದಾರೆ.

ನ್ಯೂಜಿಲ್ಯಾಂಡ್‌ ಸ್ಕೋರ್‌
ಬೋರ್ಡ್‌ನಲ್ಲಿ ದೊಡ್ಡ ಮೊತ್ತ ದಾಖಲಾಗ ಬೇಕಾದರೆ ಅಥವಾ ಚೇಸಿಂಗ್‌ನಲ್ಲಿ ಯಶಸ್ವಿಯಾಗಬೇಕಾ ದರೆ ಫಿನ್‌ ಅಲೆನ್‌, ಗ್ಲೆನ್‌ ಫಿಲಿಪ್ಸ್‌, ಡ್ಯಾರಿಲ್‌ ಮಿಚೆಲ್‌ ಅವರೆಲ್ಲ ಸಿಡಿದು ನಿಲ್ಲುವುದು ಮುಖ್ಯ.

ಆರಂಭ : ಮಧ್ಯಾಹ್ನ 12ಕ್ಕೆ , ಪ್ರಸಾರ : ಡಿಡಿ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next