Advertisement

ಏಕದಿನಕ್ಕೂ ಪಾಂಡ್ಯ ಸೂಕ್ತ ನಾಯಕ: ಗಾವಸ್ಕರ್‌

12:16 AM Mar 15, 2023 | Team Udayavani |

ಮುಂಬಯಿ: ವರ್ಷಾಂ ತ್ಯದ ವಿಶ್ವಕಪ್‌ ಬಳಿಕ ಹಾರ್ದಿಕ್‌ ಪಾಂಡ್ಯ ಅವರನ್ನು ಭಾರತದ ಏಕದಿನ ತಂಡದ ನಾಯಕತ್ವಕ್ಕೆ ಧಾರಾಳವಾಗಿ ಪರಿಗಣಿಸಬಹುದು ಎಂಬುದಾಗಿ ಮಾಜಿ ಆರಂಭಕಾರ ಸುನೀಲ್‌ ಗಾವಸ್ಕರ್‌ ಹೇಳಿದ್ದಾರೆ.

Advertisement

“ಹಾರ್ದಿಕ್‌ ಪಾಂಡ್ಯ ಅವರ ಟಿ20 ನಾಯಕತ್ವ ಬಹಳ ಪ್ರಭಾವಶಾಲಿಯಾಗಿತ್ತು. ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಅವರು ಮುನ್ನಡೆಸಿದ ರೀತಿ ಪ್ರಶಂಸನೀಯ. ಹಾಗೆಯೇ ಭಾರತವನ್ನೂ ಟಿ20 ಪಂದ್ಯ ಗಳಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಮುಂಬಯಿ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದೇ ಆದರೆ 2023ರ ವಿಶ್ವಕಪ್‌ ಬಳಿಕ ಪಾಂಡ್ಯ ಹೆಸರೇ ಏಕದಿನ ನಾಯಕತ್ವದ ಮುಂಚೂಣಿಯಲ್ಲಿರುತ್ತದೆ” ಎಂಬುದಾಗಿ ಗಾವಸ್ಕರ್‌ ಹೇಳಿದ್ದರು.

“ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ ಗೇಮ್‌ ಚೇಂಜರ್‌ ಎಂಬುದರಲ್ಲಿ ಎರಡು ಮಾತಿಲ್ಲ. ಗುಜರಾತ್‌ ಪರ ಅವರಾಗಿಯೇ ಬ್ಯಾಟಿಂಗ್‌ ಸರದಿಯಲ್ಲಿ ಭಡ್ತಿ ಪಡೆದು ಬಂದು ಪಂದ್ಯವನ್ನು ಗೆಲ್ಲಿಸಿದ್ದಿದೆ. ಸಹ ಆಟಗಾರರನ್ನು ಉತ್ತೇಜಿಸುತ್ತ ಇರುತ್ತಾರೆ. ಇದರಿಂದ ಆಟಗಾರರ ಮೇಲೆ ಒತ್ತಡ ಕಡಿಮೆ ಆಗುತ್ತದೆ, ಅವರಿಗೆ ಸಹಜ ಶೈಲಿಯ ಆಟ ಸಾಧ್ಯವಾಗುತ್ತದೆ” ಎಂದು ಗಾವಸ್ಕರ್‌ ಅಭಿಪ್ರಾಯಪಟ್ಟರು.

ಆಸ್ಟ್ರೇಲಿಯ ಎದುರಿನ ಮೊದಲ ಏಕದಿನ ಪಂದ್ಯ ಶುಕ್ರವಾರ ಮುಂಬಯಿಯಲ್ಲಿ ನಡೆಯಲಿದೆ. ಕೌಟುಂಬಿಕ ಕಾರಣಗಳಿಂದಾಗಿ ನಾಯಕ ರೋಹಿತ್‌ ಶರ್ಮ ತವರಿನ ಪಂದ್ಯವನ್ನು ಆಡುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next