Advertisement

ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು

02:18 PM Dec 10, 2021 | Team Udayavani |

ನಾಗಮಂಗಲ: ಅಂತಾರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಿನದಂದೇ ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯ್ತಿಯ ಇಬ್ಬರು ಲಂಚಕೋರ ಅಧಿಕಾರಿಗಳು ಬಲೆಗೆ ಬಿದ್ದಿದ್ದಾರೆ.‌

Advertisement

ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಆರ್‌.ವಿ.ಮಂಜುನಾಥ್‌ ಮತ್ತು ಪ್ರಭಾರ ಕಂದಾಯ ನಿರೀಕ್ಷಕ ಎಲ್‌ .ದೇವರಾಜು ಎಂಬುವರೇ ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿರುವವರು.

30 ಸಾವಿರ ರೂ. ಲಂಚಕ್ಕೆ ಬೇಡಿಕೆ: ಬೆಳ್ಳೂರು ಕ್ರಾಸ್‌ನಲ್ಲಿ ಕಂದಾಯ ಇಲಾಖೆಯಲ್ಲಿ ಅನ್ಯಕ್ರಾಂತಗೊಂಡಿದ್ದ ಜಮೀನಿನಲ್ಲಿ ವಸತಿ ಉದ್ದೇಶಕ್ಕಾಗಿ ಇಸ್ವತ್ತು ಖಾತೆ ಮಾಡಿಕೊಡಲು ಈ ಅಧಿಕಾರಿಗಳು 30 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟು, ಗುರುವಾರ ಸಂಜೆ ಲಂಚದ ಮುಂಗಡ ಹಣ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

 ನ.30 ಅರ್ಜಿ ಸಲ್ಲಿಕೆ: ತಾಲೂಕಿನ ಬೆಳ್ಳೂರು ಕ್ರಾಸ್‌ನ ಮಾಯಣ್ಣಗೌಡ (ಗುಂಡ) ಎಂಬುವರು ತಮಗೆ ಸೇರಿದ್ದ ಗೋವಿಂದಘಟ್ಟ ಸರ್ವೇ ನಂ.6/7ರ 24 ಗುಂಟೆ ಜಮೀನನ್ನು ವಸತಿ ಉದ್ದೇಶಕ್ಕಾಗಿ ಅನ್ಯಕ್ರಾಂತ ಮಾಡಿಸಿ ಈ ಜಮೀನನ್ನು ಇ-ಸ್ವತ್ತು ಖಾತೆ ಮಾಡಿಕೊಡು ವಂತೆ ಕಳೆದ ನ.30ರಂದು ಬೆಳ್ಳೂರು ಪಟ್ಟಣ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ದರು.

ಕಚೇರಿಗೆ ಅಲೆದಾಡಿಸಿದರು: ಇ-ಖಾತೆ ಮಾಡಿಕೊಡಲು ಮೀನಾಮೇಷ ಎಣಿಸುತ್ತಿದ್ದ ಮುಖ್ಯಾಧಿಕಾರಿ ಆರ್‌.ವಿ.ಮಂಜುನಾಥ್‌ ಮತ್ತು ಪ್ರಭಾರ ರಾಜಸ್ವ ನಿರೀಕ್ಷಕ ಎಲ್‌ .ದೇವರಾಜು, ಇಲ್ಲಸಲ್ಲದ ಸಬೂಬು ಹೇಳಿ ಮಾಯಣ್ಣಗೌಡನನ್ನು ಪ್ರತಿನಿತ್ಯ ಕಚೇರಿಗೆ ಅಲೆಸುವ ಜೊತೆಗೆ 30 ಸಾವಿರ ಕೊಟ್ಟರೆ ಜಮೀನಿನ ಖಾತೆ ಮಾಡಿಕೊಡುವುದಾಗಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.

Advertisement

 ಮಂಡ್ಯಕ್ಕೆ ಕರೆದೊಯ್ದರು: ಇದರಿಂದ ಬೇಸತ್ತ ಮಾಯಣ್ಣಗೌಡ ಕೆಲದಿನಗಳ ಹಿಂದೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಗುರುವಾರ ಮಧ್ಯಾಹ್ನ ಬೆಳ್ಳೂರು ಪ.ಪಂ. ಕಚೇರಿಯಲ್ಲಿ ಅರ್ಜಿದಾರ ಮಾಯಣ್ಣಗೌಡ ಕಂದಾಯ ನಿರೀಕ್ಷಕ ದೇವರಾಜುಗೆ ಮುಂಗಡವಾಗಿ 3 ಸಾವಿರ ರೂ.ಲಂಚದ ಹಣ ನೀಡುವ ಸಮಯಕ್ಕೆ ಸರಿಯಾಗಿ ಹೊಂಚುಹಾಕಿ ಎಸಿಬಿ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿದರು.

ಇದನ್ನೂ ಓದಿ;- ದಾವಣಗೆರೆ: ಗುರುವಿಗೇ ಕುಚೇಷ್ಟೆ,ವಿಕೃತ ಖುಷಿ ವಿಡಿಯೋ ವೈರಲ್;ಕ್ರಮಕ್ಕೆ ಆದೇಶ

ಹಣದೊಂದಿಗೆ ಆರ್‌ಐ ದೇವರಾಜು ಹಾಗೂ ಮುಖ್ಯಾಧಿಕಾರಿ ಆರ್‌ .ವಿ.ಮಂಜು ನಾಥ್‌ನನ್ನು ವಶಕ್ಕೆ ಪಡೆದು ಸಂಜೆವರೆಗೂ ವಿಚಾರಣೆ ನಡೆಸಿದ ಬಳಿಕ ಬಲೆಗೆ ಬಿದ್ದ ಇಬ್ಬರೂ ಆರೋಪಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ಜೊತೆಯಲ್ಲಿ ಯೇ ಮಂಡ್ಯಕ್ಕೆ ಕರೆದೊಯ್ದರು. ಎಸಿಬಿ ಡಿವೈಎಸ್‌ಪಿ ಧರ್ಮೇಂದ್ರ, ಇನ್ಸ್‌ಪೆಕ್ಟರ್‌ಗಳಾದ ಪುರುಷೋತ್ತಮ, ವಿನೋದ್‌ರಾಜ್‌, ವೆಂಕಟೇಶ್‌ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿಗಳಾದ ಮಹದೇವ್‌, ಕುಮಾರ್‌, ಪಾಪಣ್ಣ ಹಾಗೂ ಮಹೇಶ್‌ ಕರ್ತವ್ಯ ನಿರ್ವಹಿಸಿದರು.

ಕಚೇರಿಯ ಸರ್ವಾಧಿಕಾರಿಯಾಗಿದ್ದ ದೇವರಾಜು? ಮೂಲತಃ ತಾಲೂಕಿನ ಬೆಳ್ಳೂರಿನವರೇ ಆದ ರಾಜಸ್ವ ನಿರೀಕ್ಷಕ ದೇವರಾಜು ಕೆಲಕಾಲ ಬೆಳ್ಳೂರು ಪ.ಪಂ.ನಲ್ಲಿ ಕರ್ತವ್ಯ ನಿರ್ವಹಿಸಿದ ನಂತರ ಪಾಂಡವಪುರ ತಾಲೂಕಿಗೆ ವರ್ಗಾವಣೆಗೊಂಡಿದ್ದರು. ಕಳೆದೊಂದು ವರ್ಷದಿಂದ ಪುನಃ ಬೆಳ್ಳೂರು ಪಟ್ಟಣ ಪಂಚಾಯ್ತಿಗೆ ವರ್ಗಾವಣೆಯಾಗಿದ್ದ ಇವರು, ಕಚೇರಿಯ ಗ್ರೂಪ್‌ ಡಿ ನೌಕರನಿಂದ ಹಿಡಿದು ಮುಖ್ಯಾಧಿಕಾರಿವರೆಗೂ ನಾನೇ ಸರ್ವಾಧಿಕಾರಿ ಎಂಬಂತೆ ದರ್ಪದಿಂದ ಕರ್ತವ್ಯ ನಿರ್ವಹಿತ್ತಿದ್ದರೆಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next