ಕುಷ್ಟಗಿ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆ ಜ.30ಕ್ಕೆ ಕುಷ್ಟಗಿ ವಿಧಾನಸಭೆ ಕ್ಷೇತ್ರಕ್ಕೆ ಆಗಮಿಸಲಿದೆ.
Advertisement
ಜ.30 ರಂದು ಹಸನಸಾಬ್ ದೋಟಿಹಾಳ ಜಾಗೆಯಲ್ಲಿ ಆಯೋಜಿಸಲಾಗಿರುವ ಜೆಡಿಎಸ್ ಪಕ್ಷದ ಸಮಾವೇಶದ ಬಹಿರಂಗ ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳ ಕುರಿತು ಮಾಹಿತಿ ನೀಡುವರು.
ಈ ಹಿನ್ನೆಲೆಯಲ್ಲಿ ಜ.25 ರಂದು ಬೆಳಗ್ಗೆ10ಕ್ಕೆ ಕುಷ್ಟಗಿಯ ಹಳೆಯ ನೆರೆಬೆಂಚಿ ರಸ್ತೆಯಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವ ಭಾವಿ ಸಭೆ ಆಯೋಜಿಸಲಾಗಿದೆ. ಎಂದು ನಿಯೋಜಿತ ಜೆಡಿಎಸ್ ಅಭ್ಯರ್ಥಿ ತುಕಾರಾಮ್ ಸೂರ್ವೆ ತಿಳಿಸಿದ್ದಾರೆ.