ಮುದ್ದೇಬಿಹಾಳ: ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಜ.21ರ ಶನಿವಾರ ನಡೆಯಬೇಕಿದ್ದ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಂಚರತ್ನ ರಥಯಾತ್ರೆಯನ್ನು ಸಿಂದಗಿ ಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜ್ಯಾಳ ಅವರ ಹಠಾತ್ ನಿಧನ ಹಿನ್ನೆಲೆ ಭಾನುವಾರಕ್ಕೆ ಮುಂದೂಡಲಾಗಿದೆ ಎಂದು ಈ ಮೊದಲು ತಿಳಿಸಲಾಗಿತ್ತು.
ಆದರೆ ಸೋಮಜ್ಯಾಳ ಅವರ ಅಂತ್ಯಕ್ರಿಯೆ ಇಂದೇ ಮದ್ಯಾಹ್ನ ನಡೆಯುವುದರಿಂದ ಅಂತ್ಯಕ್ರಿಯೆ ಮುಕ್ತಾಯಗೊಂಡ ಮೇಲೆ ಇಂದೇ ಅಂದರೆ ಜ. 21ರ ಶನಿವಾರ ಸಂಜೆ 4 ಕ್ಕೆ ನಡೆಯಲಿದೆ ಎಂದು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿ ಡಾ. ಸಿ.ಎಸ್.ಸೋಲಾಪೂರ ತಿಳಿಸಿದ್ದಾರೆ.
ಮುದ್ದೇಬಿಹಾಳ ಪಟ್ಟಣದಲ್ಲಿ ರೋಡ್ ಶೋ, ಬಹಿರಂಗ ಸಭೆ ಆಯೋಜಿಸಿ ನಂತರ ರಾತ್ರಿ ಬಳವಾಟದಲ್ಲಿ ಗ್ರಾಮ ವಾಸ್ತವ್ಯ ನಡೆಸಲು ಮಾಜಿ ಸಿಎಂ ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ ಎಂದು ವಿವರಿಸಿದರು.