Advertisement

ತಾತ್ಕಾಲಿಕ ಧರಣಿ ಹಿಂಪಡೆದ ಪಂಚಮಸಾಲಿ ಸಮುದಾಯದ ಹೋರಾಟಗಾರರು

01:07 PM Mar 15, 2021 | Team Udayavani |

ಬೆಂಗಳೂರು: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಯ ಬಗ್ಗೆ ಆರು ತಿಂಗಳಲ್ಲಿ ವರದಿ ಪಡೆಯುವ ಬಗ್ಗೆ ಸಿಎಂ ಯಡಿಯೂರಪ್ಪ ಭರವಸೆ ನೀಡಿದ ಹಿನ್ನಲೆಯಲ್ಲೊ ತಾತ್ಕಾಲಿಕವಾಗಿ ಧರಣಿ ಹಿಂಪಡೆಯಲು ಜಯ ಮೃತ್ಯುಂಜಯ ಸ್ವಾಮೀಜಿ ನಿರ್ಧರಿಸಿದ್ದಾರೆ.

Advertisement

ಸದನದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ ಬಳಿಕ ಸಚಿವ ಸಿಸಿ ಪಾಟೀಲ್,  ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್ ಸ್ವಾಮೀಜಿಯವರಿಗೆ ಧರಣಿ ಹಿಂಪಡೆಯಲು ಮನವಿ ಮಾಡಿಕೊಂಡರು.

ಈ ಬಗ್ಗೆ ಮಾತನಾಡಿದ ಶಾಸಕ ಯತ್ನಾಳ್, ಸಮಗ್ರ ಮೀಸಲಾತಿ ನೀಡುವಂತೆ ಸಿಎಂ ಗೆ ಮನವಿ ಮಾಡಿದ್ದೆವು. ಎಲ್ಲಾ ಉಪಜಾತಿಗಳನ್ನೂ ಮೀಸಲಾತಿಗೆ ಸೇರಿಸುವಂತೆ ಮನವಿ ಮಾಡಿದ್ದೇವೆ. ಈಗ ಆರು ತಿಂಗಳ ಒಳಗಾಗಿ ವರದಿ ಸಿದ್ದಪಡಿಸುವಂತೆ ಸೂಚಿಸಲಾಗಿದೆ. ಆರು ತಿಂಗಳಲ್ಲಿ ಸ್ಪಷ್ಟನೆ ದೊರೆಯಲಿದೆ. ಹೀಗಾಗಿ ಸಿಎಂಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದರು.

ಸಿಎಂ ಮೇಲೆ ವಿಶ್ವಾಸ ಇಡಬೇಕಾಗುತ್ತದೆ. ಸದನದಲ್ಲೇ ಅವರು ಸ್ವಯಂ ಪ್ರೇರಿತವಾಗಿ ಹೇಳಿಕೆ ಕೊಟ್ಟಿದ್ದಾರೆ. ಸುಭಾಷ್ ಆಡಿ ಸಮಿತಿ ಕಾನೂನಾತ್ಮಕ ವರದಿಯಾಗಿಲ್ಲ. ಹಿಂದುಳಿದ ಆಯೋಗದ ಶಿಫಾರಸ್ಸು ಕೊಟ್ಟಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next