ಬೆಂಗಳೂರು : ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸಿಎಂ ನಿವಾಸದ ಎದುರು ಧರಣಿ ನಡೆಸಲು ಮಠಾಧೀಶರು ಕರೆ ನೀಡಿರುವ ಹಿನ್ನೆಲೆಯಲ್ಲಿ ಪಂಚಮಸಾಲಿ ಮುಖಂಡರ ಜೊತೆ ಸಂಧಾನ ಸಭೆ ಆರಂಭವಾಗಿದೆ.
ಸಚಿವ ಸಿ.ಸಿ. ಪಾಟೀಲ್ ಮೂಲಕ ಸಂಧಾನ ಸಭೆ ನಡೆಯುತ್ತಿದೆ.ಸಚಿವರ ಸರ್ಕಾರಿ ನಿವಾಸದಲ್ಲಿ ಮಹತ್ವದ ಸಂಧಾನ ಸಭೆ ಆರಂಭವಾಗಿದೆ. ಸಭೆಗೆ ಜಯ ಮೃತ್ಯುಂಜಯ ಸ್ವಾಮೀಜಿ, ಮಾಜಿ ಸಚಿವ ವಿನಯ್ ಕುಲಕರ್ಣಿ, ಅರವಿಂದ ಬೆಲ್ಲದ್, ವಿಜಯಾನಂದ ಕಾಶಪ್ಪನವರ, ಎಂ.ಪಿ ನಾಡಗೌಡ ಮೊದಲಾದವರು ಆಗಮಿಸಿದ್ದು, ಸದ್ಯದಲ್ಲೇ ವಿವಾದದ ಬಗ್ಗೆ ಒಂದು ತೀರ್ಮಾನ ಪ್ರಕಟವಾಗುವ ಸಾಧ್ಯತೆ ಇದೆ.
ಸಭೆಯ ಕುರಿತು ಸಿ.ಸಿ.ಪಾಟೀಲ್ ಅವರು ಸಿಎಂ ಬೊಮ್ಮಾಯಿ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.