– – –
ಆಧುನಿಕ ಜೀವನ ಶೈಲಿಯಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿರುವ ಆಯುರ್ವೇದ ಔಷಧ ಪದ್ಧತಿ ಎಂತಹ ಕಾಯಿಲೆ, ಒತ್ತಡಗಳಿದ್ದರೂ ಮೂಲದಿಂದಲೇ ವಾಸಿ ಮಾಡುವ ಗುಣ ಹೊಂದಿದೆ.
Advertisement
ಇಲ್ಲಿ ವೈದ್ಯರು ಕೇವಲ ಕಾಯಿಲೆಗೆ ಮಾತ್ರ ಔಷಧ ಕೊಡುವುದಿಲ್ಲ. ದೇಹ, ಮನಸ್ಸು, ಪ್ರಕೃತಿ, ಆತ್ಮ ಮತ್ತು ದೋಷಗಳು, ಮಲ ಮತ್ತು ಧಾತುಗಳ ಸ್ಥಿತಿಯತ್ತಲೂ ಗಮನ ಹರಿಸುತ್ತಾರೆ.
Related Articles
Advertisement
ಅದಕ್ಕಾಗಿ ಸಾಮಾನ್ಯವಾಗಿ ಬಿಡುವಿಲ್ಲದ ವೃತ್ತಿ ಜೀವನದೆಡೆಯಲ್ಲೂ ಪಂಚಕರ್ಮ ಚಿಕಿತ್ಸೆ ಅಗತ್ಯ. ಔಪಚಾರಿಕವಾದ ಸ್ನೇಹ ಪ್ರಯೋಗ (ಔಷಧೀಯ ತುಪ್ಪ ಸೇವನೆ) ಮತ್ತು ಸ್ವೇದನ (ಬೆವರಿಸುವಿಕೆ)ದ ನಂತರ ಆಯ್ದ ಶೋಧನ ಪ್ರಯೋಗ (ವಮನ, ವಿರೇಚನ, ವಸ್ತಿ, ಸಸ್ಯ, ರಕ್ತಮೋಕ್ಷ ಇವುಗಳಲ್ಲಿ ಸೂಕ್ತವಾದುದು)ವನ್ನು ಚುಟುಕಾಗಿ ಸುಲಭ ರೀತಿಯಲ್ಲಿ ಕಾಲೀಯವಾಗಿ ಮಾಡುವುದರಿಂದ ಶಾಸ್ತ್ರೋಕ್ತವಾದ ಫಲಿತಾಂಶ ಸಿಗದೇ ಇದ್ದರೂ ಮಲಾಂಶವು ಶರೀರದಲ್ಲಿ ವೃದ್ಧಿಸುವುದನ್ನು ತಡೆಗಟ್ಟಬಹುದು. ಆದ್ದರಿಂದಲೇ ಪಂಚಕರ್ಮಗಳು ಈ ನಿಟ್ಟಿನಲ್ಲಿ ಬಹು ಪರಿಣಾಮಕಾರಿ ಎಂದಿದ್ದಾರೆ ಬೆಂಗಳೂರಿನ ವೈದ್ಯರತ್ನಂ ಚಿಕಿತ್ಸಾಲಯದ ಹಿರಿಯ ವೈದ್ಯ ಮತ್ತು ವ್ಯವಸ್ಥಾಪಕ ಡಾ. ಕೇಶವ ಭಟ್ ಸರ್ಪಂಗಳ.
ವೈದ್ಯರತ್ನಂ ಆಯುರ್ವೇದ ಫೌಂಡೇಶನ್‌ನಡಿ ವೈದ್ಯರತ್ನಂ ಔಷಧಶಾಲಾ, ವೈದ್ಯರತ್ನಂ ನರ್ಸಿಂಗ್ ಹೋಂ, ವೈದ್ಯರತ್ನಂ ಆಯುರ್ವೇದ ಕಾಲೇಜ್, ರಿಸರ್ಚ್ ಮತ್ತು ಡೆವಲಪ್‌ಮೆಂಟ್ ಲ್ಯಾಬ್, ವೈದ್ಯ ವಿದ್ಯಾರ್ಥಿಗಳ ತರಬೇತಿ ಕೇಂದ್ರ ಹಾಗೂ ವೈದ್ಯರತ್ನಂ ಆಯುರ್ವೇದ ಮ್ಯೂಸಿಯಂ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನ ಹೆಚ್‌ಎಸ್‌ಆರ್ ಬಡಾವಣೆಯ ವೈದ್ಯರತ್ನಂನ ಚಿಕಿತ್ಸಾ ಕೇಂದ್ರದಲ್ಲಿ ಪರಿಣಿತ ಹಾಗೂ ಅನುಭವಿ ವೈದ್ಯರ ಸಮಾಲೋಚನೆ (ಕೌನ್ಸಿಲಿಂಗ್) ಕೂಡ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿ 080-22580020, ಮೊ. 9449593130 ಅಥವಾ ಇಮೇಲ್‌ನಲ್ಲಿ cಚrಛಿಃvಚಜಿಛyಚrಚಠಿnಚಞಚಿlr.cಟಞ ಪಡೆಯಬಹುದು.