Advertisement

ಮನೆ ಮನೆಗೆ ಒಂಟಿಕೊಪ್ಪಲ್‌ ಪಂಚಾಂಗ

03:31 PM Apr 11, 2021 | Team Udayavani |

ಮೈಸೂರು: ಯುಗಾದಿ ಹಬ್ಬದ ಅಂಗವಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ಮನೆ ಮನೆಗೆ ಒಂಟಿಕೊಪ್ಪಲ್‌ ಪಂಚಾಂಗ ಅಭಿಯಾನ ನಡೆಸಲಾಯಿತು.

Advertisement

ನಗರದ ರಾಮಾನುಜ ರಸ್ತೆಯಲ್ಲಿರುವ ರಾಜಾರಾಮ್‌ ಅಗ್ರಹಾರದಲ್ಲಿ ಮೈಸೂರು ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷಡಿ.ಟಿ. ಪ್ರಕಾಶ್‌ ಮನೆ ಮನೆಗಳಿಗೆ ಕ್ಯಾಲೆಂಡರ್‌ ನೀಡುವ ಅಭಿಯಾನಕ್ಕೆ ಚಾಲನೆ ನೀಡಿ, ಸೌರಮಂಡಲದ ಆಧಾರಿತದಮೇಲೆ ಭೂಮಿಯಲ್ಲಿ ನಡೆಯುವ ಬದಲಾವಣೆಯನ್ನು ತಿಳಿಸುವುದೇ ಪಂಚಾಂಗ, ಯುಗಾದಿ ವರ್ಷಾಚರಣೆ ಬೇವು-ಬೆಲ್ಲವು ಕಹಿ, ಸಿಹಿಯ ಸಂಕೇತ. ಸಮ ಬಾಳಿನ ಜೀವನವನ್ನು ಸರಿಯಾದ ಸಂದರ್ಭದಲ್ಲಿ ನಡೆಸಬೇಕಾದರೆ ಪಂಚಾಂಗದ ನಿರ್ಧಾರ ಮುಖ್ಯವಾಗುತ್ತದೆ. ಸಂವತ್ಸರ ಮಾಸ, ತಿಥಿ, ನಕ್ಷತ್ರ, ರಾಶಿಯ ಕಾಲದ ಘಳಿಗೆಯ ಮಾಹಿತಿ ಮೊದಲು ತಿಳಿದುಕೊಳ್ಳಬಹುದು ಎಂದು ತಿಳಿಸಿದರು.

ನಂತರ ಕಾಂಗ್ರೆಸ್‌ ಯುವ ಮುಖಂಡ ಎನ್‌.ಎಂ. ನವೀನ್‌ ಕುಮಾರ್‌ ಮಾತನಾಡಿ, ಒಂಟಿಕೊಪ್ಪಲ್‌ ಪಂಚಾಂಗವೂ ದೇಶ, ವಿದೇಶದಲ್ಲಿ ಜನಪ್ರಿಯವಾಗಿರುವುದು ಮೈಸೂರಿನಹಿರಿಮೆಯನ್ನು ಹೆಚ್ಚಿಸಿದೆ. ಧಾರ್ಮಿಕ ಸಂಪ್ರಾದಯವನ್ನು ಪರಿಪಾಲಿಸುವವರು ಪಂಚಾಂಗದ ಮಾಹಿತಿಯನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.

ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಕೆ.ರಘುರಾಂ ವಾಜಪೇಯಿ ಮಾತನಾಡಿ, ಸಮಾಜದಲ್ಲಿ ಯಾವುದೇಶುಭಕಾರ್ಯಗಳ ದಿನಾಂಕಗಳು ನಿಗದಿಯಾಗುವುದೇಪಂಚಾಂಗದ ಆಧಾರದ ಮೇಲೆ. ಮಳೆ, ಬೇಸಿಗೆ ಹಾಗೂಚಳಿಗಾಲದ ಸ್ಥಿತಿಗತಿಯ ಸೂಕ್ಷ್ಮವನ್ನು ಮೊದಲೇ ತಿಳಿಯುವ ಶಕ್ತಿ ಪಂಚಾಂಗಕ್ಕಿದೆ ಎಂದರು.

ಶುಭ, ಸಮಾರಂಭದ ಘಳಿಗೆ ಮುಹೂರ್ತ ತಿಳಿಸುವ ಒಂಟಿಕೊಪ್ಪಲ್‌ ಪಂಚಾಂಗಕ್ಕಾಗಿ ನೂರಾರು ವರ್ಷಗಳಿಂದ ಶ್ರಮಿಸುತ್ತಿರುವ ರಾಮಕೃಷ್ಣ ಶಾಸ್ತ್ರಿ ಹಾಗೂ ಅವರ ಪುತ್ರ ಕುಮಾರ್‌ಶಾಸ್ತ್ರಿ ಅವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕಿದೆ ಎಂದರು.

Advertisement

ಈ ವೇಳೆ ನಗರ ಪಾಲಿಕೆ ಸದಸ್ಯ ಮಾ.ವಿ. ರಾಮ್‌ ಪ್ರಸಾದ್‌, ಎಂ.ಸಿ. ರಮೇಶ್‌, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಎಂ.ಆರ್‌. ಬಾಲಕೃಷ್ಣ , ಬ್ರಾಹ್ಮಣ ಯುವ ವೇದಿಕೆ ಪ್ರಧಾನಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್‌, ಸಂಘಟನಾ ಕಾರ್ಯದರ್ಶಿ ಅಜಯ್‌ ಶಾಸ್ತ್ರಿ, ವಿನಯ್‌ ಕಣಗಾಲ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next