Advertisement

ಪಣಂಬೂರು: ತೈಲ ಟ್ಯಾಂಕರ್‌ ಪಲ್ಟಿ

06:10 AM Mar 11, 2018 | |

ಪಣಂಬೂರು: ಅಡ್ಡ ಬಂದ ದ್ವಿಚಕ್ರ ಸವಾರನನ್ನು ರಕ್ಷಿಸಲು ಹೋಗಿ ನಿಯಂತ್ರಣ ತಪ್ಪಿದ  ತೈಲ ಸಾಗಾಟ ಕಂಟೈನರ್‌ ಲಾರಿ ಉರುಳಿ ಬಿದ್ದ ಘಟನೆ ಶನಿವಾರ ಪಣಂಬೂರು ಬಳಿ ಸಂಭವಿಸಿದೆ.

Advertisement

ಪಣಂಬೂರು ಬೀಚ್‌ ರಸ್ತೆ ಬಳಿ  ಬೈಕ್‌ ಸವಾರ ಏಕಾಏಕಿ ಅಡ್ಡ ಬಂದ ಕಾರಣ ಕಂಟೈನರ್‌ ಚಾಲಕ ಟ್ರಕ್‌ ಅನ್ನು ಅನಿರೀಕ್ಷಿತವಾಗಿ ತಿರುಗಿಸಿದ ಪರಿಣಾಮ ನಿಯಂತ್ರ ತಪ್ಪಿತು. ಡಿವೈಡರ್‌ ಗೆ ಢಿಕ್ಕಿ ಹೊಡೆದು ಉರುಳಿ ಬಿತ್ತು. ಟ್ರಕ್‌ ಚಾಲಕ ಹಾಗೂ  ಬೈಕ್‌ ಸವಾರ ಗಾಯಗಳಿಲ್ಲದೆ ಪಾರಾಗಿದ್ದಾರೆ. ಢಿಕ್ಕಿ ಹೊಡೆದ ರಭಸಕ್ಕೆ ಬೀದಿ ದೀಪದ ಕಂಬ ಉರುಳಿ ಬಿದ್ದಿದ್ದು , ಕಂಟೈನರ್‌ ನಲ್ಲಿದ್ದ ಒಂದೆರಡು ಬ್ಯಾರೆಲ್‌  ತೈಲ ರಸ್ತೆಗೆ ಚೆಲ್ಲಿತು. ಅದರ ಮೇಲೆ ವಾಹನಗಳು ಸಂಚರಿಸುವಾಗ ಜಾರದಂತೆ  ಮರಳು ಸುರಿಯಲಾಯಿತು. 

ಕೆಲ ಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಜೆಸಿಬಿ ಮೂಲಕ ಕಂಟೈನರ್‌ ಅನ್ನು  ಸ್ಥಳಾಂತರಿಸಿದ ಮಂಗಳೂರು ಉತ್ತರ ಸಂಚಾರ  ಪೊಲೀಸರು ಸುಗಮ ಸಂಚಾರಕ್ಕೆ ಶ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next