Advertisement

ಪಣಂಬೂರು: ಮಕ್ಕಳ ಸರ್ಫಿಂಗ್‌ ಸ್ಪರ್ಧೆ

10:18 PM May 19, 2019 | Team Udayavani |

ಪಣಂಬೂರು: ಇಲ್ಲಿನ ಕಡಲ ಕಿನಾರೆಯಲ್ಲಿ ಮಂತ್ರ ಗ್ರೋಮ್‌ ಸರ್ಚ್‌ ಎಂಬ ಮಕ್ಕಳ ಸರ್ಫಿಂಗ್‌ ಸ್ಪರ್ಧೆ ರವಿವಾರ ಜರಗಿತು. ಪ್ರತಿಭಾನ್ವಿತ ಯುವ ಸಫìರ್‌ಗಳನ್ನು ಹುಡುಕಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎರಡನೇ ಬಾರಿಗೆ ಸರ್ಫಿಂಗ್‌ ಸ್ವಾಮಿ ಫೌಂಡೇಶನ್‌, ಮಂತ್ರ ಸರ್ಫ್‌ ಕ್ಲಬ್‌, ಅಡ್ವೆಂಚರ್‌ ವರ್ಕ್ಸ್, ಥಂಡರ್‌ ಮಂಕಿ, ಫೈಯರ್‌ವೈರ್‌ ಸರ್ಫ್‌ ಬೋರ್ಡ್‌ ಮುಂತಾದ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

Advertisement

ಸುಮಾರು 30 ಸ್ಪರ್ಧಿಗಳು ಭಾಗವಹಿಸಿ ಕಡಲ ಅಲೆಗಳಲ್ಲಿ ಸಾಹಸ ಪ್ರದರ್ಶಿಸಿದರು. 13, 16 ವರ್ಷದೊಳಗಿನ, ಓಪನ್‌ ವಿಭಾಗ, ಮತ್ತು ಬಾಲಕಿಯ ವಿಭಾಗದಲ್ಲಿ ಒಟ್ಟು ಸ್ಪರ್ಧೆ ನಡೆಯಿತು. 7 ವರ್ಷದ ಮಕ್ಕಳಿಂದ ಹಿಡಿದು 15 ವರ್ಷದವರೆಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.

ಪ್ರೋತ್ಸಾಹ ಅಗತ್ಯ
ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ವಿಜೇತ ಸರ್ಫಿಂಗ್‌ ಪಟುಗಳಿಗೆ ಪ್ರಶಸ್ತಿ ವಿತರಿಸಿದರು. ವಿಜೇತರಿಗೆ ವಿಶೇಷ ಕ್ರೀಡಾ ಬ್ಯಾಗ್‌, ನಗದು, ಟ್ರೋಫಿ ನೀಡಲಾಯಿತು. ಪ್ರಶಸ್ತಿ ವಿತರಿಸಿ ಮಾತನಾಡಿದ ಜಿಲ್ಲಾ ಧಿಕಾರಿ ಅವರು, ಸರ್ಫಿಂಗ್‌ ವಿಶೇಷ ಸಾಹಸಮಯ ಕ್ರೀಡೆಯಾಗಿದ್ದು ಪ್ರೋತ್ಸಾಹ ಅಗತ್ಯ. ಮಂಗಳೂರಿನಲ್ಲಿ ಸರ್ಫಿಂಗ್‌ಗೆ ಸೂಕ್ತವಾದ ಕಡಲ ಕಿನಾರೆಗಳಿವೆ.

ಜಿಲ್ಲಾಡಳಿತದ ವತಿಯಿಂದ ಬೇಕಾದ ಎಲ್ಲ ಪ್ರೋತ್ಸಾಹ ನೀಡಲಾಗುವುದು. ಈ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ವಿದ್ಯೆಗೂ ಮಹತ್ವ ನೀಡಿ ಶಿಕ್ಷಣದಲ್ಲೂ ಮುಂದೆ ಬರಬೇಕು ಎಂದರು. ಸ್ವಾಮಿ ಪೌಂಡೇಷನ್‌ನ ಗೌರವ್‌ ಹೆಗ್ಡೆ ಮಾತನಾಡಿ, ಕಡಲ ಕಿನಾರೆಯ ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ತೋರ್ಪಡಿಸಲು ಇದೊಂದು ಒಳ್ಳೆಯ ಅವಕಾಶ ಕಲ್ಪಿಸಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಭಾನ್ವಿತರಿಗೆ ಮುಂದೆ ಉಚಿತ ತರಬೇತಿ ಕೊಡಿಸುತ್ತೇವೆ ಎಂದರು.

ಪಣಂಬೂರು ಬೀಚ್‌ನ ಸಿಇಒ ಯತೀಶ್‌ ಬೈಕಂಪಾಡಿ, ಉದ್ಯಮಿ ರಾಮ್‌ಮೋಹನ್‌ ಪೈ ಮಾರೂರು, ಮಂತ್ರ ಸರ್ಫಿಂಗ್‌, ಸ್ವಾಮಿ ಫೌಂಡೇಷನ್‌ ಮತ್ತಿತರರ ಸಂಘಟನೆಗಳ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.

Advertisement

ಉಚಿತ ತರಬೇತಿ
ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಅವರಿಗೆ ಸರ್ಫಿಂಗ್‌ ಸ್ವಾಮಿ ಫೌಂಡೇಶನ್‌ ವತಿಯಿಂದ ಉಚಿತ ತರಬೇತಿ ವ್ಯವಸ್ಥೆ ಮಾಡಲಾಗಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆ ಗಳಲ್ಲಿ ಅವಕಾಶ ನೀಡಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next