ಪಣಜಿ: ಹವಾಮಾನ ಇಲಾಖೆಯ ಗೋವಾ ವೀಕ್ಷಣಾಲಯವು ಗುರುವಾರ ಮಾ.9 ಮತ್ತು 10 ರಂದು ಉಷ್ಣ ಅಲೆಯ ಎಚ್ಚರಿಕೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ರಾಜ್ಯದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಶಾಲಾ ತರಗತಿಯನ್ನು ನಡೆಸುವಂತೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗುರುವಾರ ರಾಜ್ಯಾದ್ಯಂದ ಶಾಲೆಯನ್ನು ಮಧ್ಯಾಹ್ನ 12 ಗಂಟೆಯ ವರೆಗೆ ಮಾತ್ರ ನಡೆಸಲಾಯಿತು.
ರಾಜ್ಯದ ಉಷ್ಣ ಅಲೆ ಬೀಸುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ಮಧ್ಯಾಹ್ನ 12 ಗಂಟೆಯ ವರೆಗೆ ಮಾತ್ರ ತರಗತಿ ನಡೆಸಲು ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಿಗೆ ಆದೇಶ ಹೊರಡಿಸಿದೆ.
Related Articles
ಗೋವಾ ಹವಾಮಾನ ಇಲಾಖೆಯ ವೀಕ್ಷಣಾಲಯವು ಮಾರ್ಚ್ 9 ರಂದು ರಾಜ್ಯದಲ್ಲಿ ಬಿಸಿಗಾಳಿಯನ್ನು ಘೋಷಿಸಿದ್ದು, ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಜನರಿಗೆ ಮನವಿ ಮಾಡಿದೆ. ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತರು ತಮ್ಮ ಕಾಳಜಿ ವಹಿಸಬೇಕು.
ರಾಜ್ಯದಲ್ಲಿ ಇಷ್ಟೊಂದು ಗರಿಷ್ಠ ತಾಪಮಾನ ದಾಖಲಾಗಿರುವುದು ಇದು ಎರಡನೇ ಬಾರಿ. ಬುಧವಾರ ರಾಜ್ಯದಲ್ಲಿ ಗರಿಷ್ಠ ತಾಪಮಾನ 38.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಸಾಮಾನ್ಯ ಗರಿಷ್ಠಕ್ಕಿಂತ ಆರು ಡಿಗ್ರಿ ಹೆಚ್ಚಾಗಿದೆ.
ಮಾರ್ಚ್ 1979 ರಲ್ಲಿ, ಪಾದರಸವು 39 ಡಿಗ್ರಿ ಸೆಲ್ಸಿಯಸ್ ತಲುಪಿತು. ಹಿಂದಿನ ದಾಖಲೆ ಮಾರ್ಚ್ 3 ರಂದು 38.7 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಗೋವಾ ಕರಾವಳಿಯಲ್ಲಿರುವ ರಾಜ್ಯ. ಎರಡು ದಿನಗಳವರೆಗೆ ಗರಿಷ್ಠ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ಅನ್ನು ಮೀರಿದಾಗ, ಹಾಗೆಯೇ ತಾಪಮಾನವು ಸಾಮಾನ್ಯಕ್ಕಿಂತ 4.5 ಡಿಗ್ರಿಗಳಷ್ಟು ಹೆಚ್ಚಾದಾಗ ಶಾಖದ ಅಲೆಯನ್ನು ಎದುರಿಸಬೇಕಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.