Advertisement

ಪಣಜಿ: ಸಾಮ್ರಾಟ್ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಶಸ್ತಿ ಪಡೆದ ಉತ್ತರ ಕನ್ನಡದ ವಿದ್ಯಾರ್ಥಿನಿ

02:57 PM Nov 30, 2021 | Team Udayavani |

ಪಣಜಿ: ಗೋವಾದ ಬಾಲಭಾರತಿ ವಿದ್ಯಾಮಂದಿರದಲ್ಲಿ 9 ನೇಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಮೂಲದ ಮಹಿಮಾ ಮಂಜುನಾಥ ಭಟ್ ಇವಳು “ಸಾಮ್ರಾಟ್ ಸ್ಟೂಡೆಂಟ್ ಆಫ್ ದಿ ಇಯರ್ 2021-2022” ಪ್ರಶಸ್ತಿ ಪಡೆದು ಸಾಧನೆಗೈದಿದ್ದಾಳೆ.

Advertisement

ಗೋವಾದ ಕರಮಳಿಯಲ್ಲಿ ಸಾಮ್ರಾಟ್ ಕ್ಲಬ್ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕ ಧರ್ಮಾ ಚೋಡಣಕರ್ ಮಹಿಮಾ ಭಟ್ ಇವಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಾಮ್ರಾಟ್ ಕ್ಲಬ್‍ನ ಅಧ್ಯಕ್ಷ ಜೈರಾಮ್ ಪೆಡ್ನೇಕರ್ ಮತ್ತಿತರರು ಉಪಸ್ಥಿತರಿದ್ದರು.

ಕುಮಾರಿ ಮಹಿಮಾ ಭಟ್ ಇವಳು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಮೂಲದ ಪುರೋಹಿತರಾದ ಮಂಜುನಾಥ ಭಟ್ ಮತ್ತು ಹೇಮಾ ಭಟ್ ದಂಪತಿಗಳ ಪುತ್ರಿಯಾಗಿದ್ದಾಳೆ. ಸದ್ಯ ಇವರು ಗೋವಾ ರಾಜಧಾನಿ ಪಣಜಿ ಸಮೀಪದ ಚಿಂಬಲ್‍ನಲ್ಲಿ ವಾಸಿಸುತ್ತಿದ್ದಾರೆ. ಕು.ಮಹಿಮಾ ಇವಳು ಶಾಲೆಯಲ್ಲಿ ಪಠ್ಯ ಚಟುವಟಿಕೆಗಳಲ್ಲಿ ಮಾತ್ರವಲ್ಲದೆಯೇ ಸಂಗೀತ, ಕರಾಟೆ, ರಾಮಾಯಣ, ಎನ್.ಸಿ.ಸಿ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹಲವಾರು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡು ಗಮನಾರ್ಹ ಸಾಧನೆಗೈಯ್ಯುವ ಮೂಲಕ “ಸಾಮ್ರಾಟ್ ಸ್ಟೂಡೆಂಟ್ ದಿ ಆಫ್ ಇಯರ್ 2021-2022” ಪ್ರಶಸ್ತಿ ಪಡೆದುಕೊಂಡಿದ್ದಾಳೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next