Advertisement

ಪಣಜಿ: ಬೆಂಕಿ ಅವಗಢ; ನಾಲ್ಕು ವಾಹನಗಳು ಸುಟ್ಟು ಭಸ್ಮ

11:18 AM Mar 06, 2023 | Team Udayavani |

ಪಣಜಿ: ಗೋವಾದ ವಾಸ್ಕೊ ಜುವಾರಿ ನಗರದ ಬಿರ್ಲಾ ಪೊಲೀಸ್ ಠಾಣೆಯ ಹೊರಭಾಗದಲ್ಲಿ ಸಂಭವಿಸಿದ ಬೆಂಕಿ ಅವಗಢದಲ್ಲಿ ನಾಲ್ಕು ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ಭಾನುವಾರ (ಮಾ.5) ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ.

Advertisement

ಆರಂಭದಲ್ಲಿ ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಆ ಬಳಿಕ ಪಕ್ಕದಲ್ಲಿ ನಿಲ್ಲಿಸಿದ್ದ ನಾಲ್ಕು ಕಾರುಗಳು ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ, ಭಾನುವಾರ ಮಧ್ಯಾಹ್ನ ಜುವಾರಿ ನಗರದಲ್ಲಿ ಒಣ ಹುಲ್ಲಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಆ ಪ್ರದೇಶದಲ್ಲಿ ನಾಲ್ಕು ಚಕ್ರದ ವಾಹನಗಳು ಬೆಂಕಿಗೆ ಆಹುತಿಯಾಗಿವೆ.

ವಾಸ್ಕೋ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ, ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಿಲ್ಲಿಸಲಾದ 4 ನಾಲ್ಕು ಚಕ್ರಗಳ ಪೈಕಿ ಒಂದು ಟ್ಯಾಕ್ಸಿ ಕೂಡ ಒಳಗೊಂಡಿದೆ.

ಘಟನೆಯ ಮಾಹಿತಿ ಲಭಿಸುತ್ತಿದ್ದಂತೆಯೇ ವಾಸ್ಕೋ ಅಗ್ನಿಶಾಮಕ ಠಾಣೆ, ವೆರ್ನಾ ಅಗ್ನಿಶಾಮಕ ಠಾಣೆ ಮತ್ತು ಜುವಾರಿ ಕಂಪನಿಯ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದರು.

Advertisement

ಘಟನೆಯಿಂದ ಉಂಟಾದ ಹಾನಿಯನ್ನು ಇನ್ನೂ ಅಂದಾಜಿಸಲಾಗಿಲ್ಲ. ಆದರೆ ನಾಲ್ಕು ಕಾರುಗಳಿಗೆ ಹಾನಿಯುಂಟಾಗಿ ಸುಮಾರು 20 ಲಕ್ಷ ರೂ. ಮೀರುವ ಸಾಧ್ಯತೆಯಿದೆ ಎಂದು ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next