ಪಣಜಿ: ಮಹಾರಾಷ್ಟ್ರ ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆ ಮತ್ತು ಇತರ ಬಂಡಾಯ ಶಾಸಕರು ಗೋವಾಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಶಿವಸೈನಿಕರು ಗೋವಾಕ್ಕೆ ಆಗಮಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಗೋವಾ ಮಹಾರಾಷ್ಟ್ರ ಗಡಿ ಭಾಗ ಪತ್ರಾದೇವಿಯಲ್ಲಿ ಹೆಚ್ಚಿನ ಪೋಲಿಸ್ ಭಧ್ರತೆ ಕಲ್ಪಿಸಲಾಗಿದೆ.
ಮಹಾರಾಷ್ಟ್ರದಿಂದ ಗೋವಾಕ್ಕೆ ಆಗಮಿಸುವ ಎಲ್ಲ ವಾಹನಗಳ ಖಡ್ಡಾಯ ತಪಾಸಣೆ ನಡೆಸಲಾಗುತ್ತಿದೆ. ಮಹಾರಾಷ್ಟ್ರದಿಂದ ಗೋವಾಕ್ಕೆ ಶಿವಸೇನೆ ಕಾರ್ಯಕರ್ತರು ಆಗಮಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಗೋವಾ ಪೆಡ್ನೆ ಪೋಲಿಸ್ ಉಪ ಅಧೀಕ್ಷಕ ಸಿದ್ದಾಂತ ಶಿರೋಡಕರ್ ಮಾರ್ಗದರ್ಶನದಲ್ಲಿ ಪೆಡ್ನೆ ಪೋಲಿಸ್ ಇನ್ಸಪೆಕ್ಟರ್ ವಿಕ್ರಮ ನಾಯ್ಕ ಮತ್ತು ಮೋಪಾ ವಿಮಾನ ನಿಲ್ದಾಣ ಪೋಲಿಸ್ ಇನ್ಸಪೆಕ್ಟರ್ ಮಹೇಶ್ ಕೇರಕರ್ ರವರ ನೇತೃತ್ವದಲ್ಲಿ ಅಧಿಕ ಭದ್ರತೆ ಕಲ್ಪಿಸಲಾಗಿದೆ.
ಮಹಾರಾಷ್ಟ್ರ ಬಂಡಾಯ ಶಾಸಕರು ತಂಗಿರುವ ತಾಜ್ ಹೋಟೆಲ್ಗೆ ಮಹಾರಾಷ್ಟ್ರದ ಶಿವಸೈನಿಕರು ಆಗಮಿಸಿ ಗೊಂದಲ ಸೃಷ್ಠಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಗೋವಾ ಮಹಾರಾಷ್ಟ್ರ ಗಡಿ ಭಾಗ ಮತ್ತು ತಾಜ್ ಹೋಟೆಲ್ ಪರಿಸರದಲ್ಲಿ ಅಧಿಕ ಪೋಲಿಸ್ ಭಧ್ರತೆ ಕಲ್ಪಿಸಲಾಗಿದೆ.
ಇದನ್ನೂ ಓದಿ : ಭ್ರಷ್ಟಾಚಾರ ಆರೋಪಿಸಿ ಕಾರವಾರ ಪೌರಾಯುಕ್ತರ ಕೊಠಡಿಯಲ್ಲಿ ಮಾಜಿ ಶಾಸಕ ಸೈಲ್ ಧರಣಿ