Advertisement

Panaji: ಅಡುಗೆ ಅನಿಲ ಸಬ್ಸಿಡಿ ಘೋಷಿಸಿದ್ದಕ್ಕೆ ಧನ್ಯವಾದ: ಮುಖ್ಯಮಂತ್ರಿ ಸಾವಂತ್ ಟ್ವೀಟ್

02:29 PM Aug 31, 2023 | Team Udayavani |

ಪಣಜಿ: ಅಡುಗೆ ಅನಿಲ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಸರಕಾರ ಪ್ರತಿ ಗ್ಯಾಸ್ ಸಿಲಿಂಡರ್‍ ಗೆ 200 ರೂ. ಸಹಾಯಧನ ಮಂಜೂರು ಮಾಡಿದೆ. ಈ ನಿರ್ಧಾರಕ್ಕೆ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೇಂದ್ರ ಸರ್ಕಾರ ಅಡುಗೆ ಅನಿಲ ಸಬ್ಸಿಡಿ ಘೋಷಿಸಿದ್ದಕ್ಕೆ ಪ್ರಧಾನಿಗೆ ಧನ್ಯವಾದ ಹೇಳಿದ್ದಾರೆ. ಎಲ್‍ಪಿಜಿ ಸಿಲಿಂಡರ್‍ ಗೆ 200 ರೂಪಾಯಿ ಸಬ್ಸಿಡಿ ಮಂಜೂರು ಮಾಡುವ ಕೇಂದ್ರದ ನಿರ್ಧಾರದ ನಂತರ ಮುಖ್ಯಮಂತ್ರಿ ಸಾವಂತ್ ಟ್ವೀಟ್ ಮಾಡಿದ್ದಾರೆ.

ಎಲ್‍ಪಿಜಿ ಬೆಲೆಯನ್ನು ರೂ. 200 ಕಡಿಮೆ ಮಾಡುವ ನಿರ್ಧಾರಕ್ಕೆ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಎಲ್‍ಪಿಜಿ ಸಿಲಿಂಡರ್ ರಿಫಿಲ್‍ಗಾಗಿ ಮುಖ್ಯಮಂತ್ರಿಗಳ ಆರ್ಥಿಕ ನೆರವು ಯೋಜನೆಯಡಿ ರಾಜ್ಯದ ಅಂತ್ಯೋದಯ ಅನ್ನ ಯೋಜನೆ ಕುಟುಂಬದ ಫಲಾನುಭವಿಗಳಿಗೆ ಗೋವಾ ಸರ್ಕಾರ ಮೂರು ಎಲ್‍ಪಿಜಿ ಸಿಲಿಂಡರ್‍ ಗಳಿಗೆ ವಾರ್ಷಿಕ 275 ರೂ. ನೀಡಲಿದೆ. ಈ ನಿರ್ಧಾರವು ಹಬ್ಬದ ಋತುವಿನಲ್ಲಿ ಗೋವಾ ಮತ್ತು ಭಾರತದಾದ್ಯಂತ ಗ್ರಾಹಕರಿಗೆ ಹೆಚ್ಚಿನ ಸೌಕರ್ಯವನ್ನು ನೀಡುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next