Advertisement

ಪಣಜಿ : ಬಾಲಕಿಯ ಅಪಹರಣ ಪ್ರಕರಣ : ಕೋಲ್ವಾ ಪೊಲೀಸರಿಂದ ನೇಪಾಳ ಮೂಲದ ವ್ಯಕ್ತಿಯ ಬಂಧನ

05:35 PM Jun 20, 2022 | Team Udayavani |

ಪಣಜಿ: ಮಾಪ್ಸಾದ ಥಿವಿಮ್ ಪರಿಸರದಲ್ಲಿನ 18 ವರ್ಷದ ಬಾಲಕಿಯನ್ನು ಅಪಹರಣ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 25 ವರ್ಷದ ನೇಪಾಳ ಮೂಲದ ರಾಜು ಅನೀಲ್ ಸುನಾರ ಎಂಬ ಆರೋಪಿಯನ್ನು ಗೋವಾದ ಕೋಲ್ವಾ ಪೋಲಿಸರು ಬಂಧಿಸಿದ್ದಾರೆ.

Advertisement

ಈ ಘಟನೆಗೆ ಸಂಬಂಧಿಸಿದಂತೆ ಅಪಹರಣಕ್ಕೊಳಗಾಗಿದ್ದ ಬಾಲಕಿಯ ಸಹೋದರಿಯು ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು.

ಅಪಹರಣಕ್ಕೊಳಗಾದ ಬಾಲಕಿಯ ಮೊಬೈಲ್ ಲೊಕೇಶನ್ ಮಹಾರಾಷ್ಟ್ರದ ನಾಸಿಕ್ ಎಂದು ತೋರಿಸುತ್ತಿತ್ತು. ಈ ಆಧಾರದ ಮೇಲೆ ಜೂನ್ 18 ರಂದು ವಿಶೇಷ ಪೋಲಿಸ್ ತನಿಖಾ ತಂಡ ರಚಿಸಿ ನಾಸಿಕ್‍ಗೆ ತೆರಳಿ ಕಾರ್ಯಾಚರಣೆ ಆರಂಭಿಸಿ ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಗೋವಾ ಪೋಲಿಸರು ಯಶಸ್ವಿಯಾಗಿದ್ದಾರೆ. ಅಪಹರಣಕ್ಕೊಳಗಾದ ಬಾಲಕಿಯನ್ನು ಪೋಲಿಸರು ಬಿಡುಗಡೆಗೊಳಿಸಿ ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ : ನವೀನ್ ಗ್ಯಾನ ಗೌಡರ್ ಕುಟುಂಬ ಸದಸ್ಯರ ಭೇಟಿಯಾದ ಪ್ರಧಾನಿ ಮೋದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next