Advertisement

Panaji: ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ

03:45 PM Mar 27, 2024 | Team Udayavani |

ಪಣಜಿ: ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

Advertisement

ಕರ್ನಾಟಕದ ಲೋಂಧಾ ಮೂಲದ ವಿಶ್ವನಾಥ್ ಸಿದ್ನಾಳ್ (35) ಪೇಡಾ-ಬಾನಾವಳಿಯಲ್ಲಿ ಬಾಡಿಗೆ ಮನೆಯಲ್ಲಿ ಚಾಕುವಿನಿಂದ ಇರಿದು ಕೊಲೆಯಾಗಿದ್ದಾನೆ.

ವಿಶ್ವನಾಥ್ ತನ್ನ ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈ ಕೊಲೆಗೆ ಅನೈತಿಕ ಸಂಬಂಧವೇ ಕಾರಣವಾಗಿರಬಹುದು ಎಂಬುದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದೇವೆ ಎಂದು ದಕ್ಷಿಣ ಗೋವಾದ ಪೊಲೀಸ್ ವರಿಷ್ಠಾಧಿಕಾರಿ ಸುನಿತಾ ಸಾವಂತ್ ತಿಳಿಸಿದ್ದಾರೆ. ಸದ್ಯ ಪೊಲೀಸರು ವಿಶ್ವನಾಥ್ ಪತ್ನಿಯನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾನುವಾರದಂದು ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಮೃತದೇಹ ಇರುವೆಗಳಿಂದ ತುಂಬಿಹೋಗಿತ್ತು. ವಿಶ್ವನಾಥ್ ಅವರ ಮೋಟಾರ್ ಸೈಕಲ್ ಮೇಲೆ ಯುವಕನೊಬ್ಬ ಸವಾರಿ ಮಾಡುತ್ತಿರುವ ದೃಶ್ಯ ರಸ್ತೆಯಲ್ಲಿನ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ವಿಶ್ವನಾಥ್ ಅವರ ಪತ್ನಿ ಅಲ್ಲಿಯೇ ಬಿದ್ದಿದ್ದಳು ಎನ್ನಲಾಗಿದೆ. ವಿಶ್ವನಾಥನ ತಾಯಿ ಸುರಾವಳಿ ಎಂಬಲ್ಲಿ ನೆಲೆಸಿದ್ದಾರೆ. ಮಂಗಳವಾರ ಮಧ್ಯಾಹ್ನ ಮಗನಿಗೆ ಊಟ ತರುತ್ತಿದ್ದಳು. ಅವಳು ಈ ಪ್ರಕಾರವನ್ನು ನೋಡಿದ್ದಾಳೆ. ಆಕೆ ತನ್ನ ನೆರೆಹೊರೆಯವರಿಗೆ ಕರೆ ಮಾಡಿ ಕರೆದಿದ್ದಾಳೆ.  ಘಟನಾ ಸ್ಥಳದಲ್ಲಿ ಪೊಲೀಸರು ಶ್ವಾನದಳದ ಸಹಾಯದಿಂದ ಹಂತಕನನ್ನು ಪತ್ತೆ ಹಚ್ಚಲು ಹೆಚ್ಚಿನ ಪ್ರಯತ್ನ ನಡೆಸಿದ್ದಾರೆ.

Advertisement

ಕೊಲೆಯ ನಂತರ ಶಂಕಿತ ವಿಶ್ವನಾಥ್ ಅವರ ದ್ವಿಚಕ್ರ ವಾಹನವನ್ನು ಮಡಗಾಂವ್ ರೈಲ್ವೆ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿದ್ದಾನೆ. ನಂತರ ದ್ವಿಚಕ್ರ ವಾಹನವನ್ನು ಅಲ್ಲೇ ಬಿಟ್ಟು ರೈಲಿನಲ್ಲಿ ಪರಾರಿಯಾಗಿದ್ದು, ಖಾನಾಪುರಕ್ಕೆ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಂತಹ ಸಾಧ್ಯತೆಯನ್ನು ಊಹಿಸಿ ಖಾನಾಪುರಕ್ಕೆ ಪೊಲೀಸ್ ಪಡೆಯನ್ನು ಕಳುಹಿಸಲಾಗಿದೆ. ಪೊಲೀಸರು ಹಂತಕನನ್ನು ಗುರುತಿಸಿದ್ದಾರೆ ಆದರೆ ಆತನ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next