Advertisement

ಪಣಜಿ : ‘ನೋ ಮ್ಯಾನ್’ಆಸ್ತಿಗಳಿಗೆ ರಕ್ಷಣೆ ನೀಡಲು ಕಾನೂನು ತಿದ್ಧುಪಡಿಗೆ ಮುಂದಾದ ಸರಕಾರ

06:48 PM Jun 28, 2022 | Team Udayavani |

ಪಣಜಿ: ವಿದೇಶದಲ್ಲಿ ವಾಸಿಸುತ್ತಿರುವ ಗೋವನ್ನರ ಆಸ್ತಿ ಅಥವಾ ಗೋವಾದಲ್ಲಿ ವಾರಸುದಾರರಿಲ್ಲದ ನೋ ಮ್ಯಾನ್ ಆಸ್ತಿಗಳಿಗೆ ರಕ್ಷಣೆ ನೀಡಲು ಗೋವಾ ಸರ್ಕಾರ ಕಾನೂನು ತಿದ್ಧುಪಡಿ ತರಲು ಮುಂದಾಗಿದೆ.

Advertisement

ರಾಜ್ಯದಲ್ಲಿ ಭೂ ಕಬಳಿಕೆ ಪ್ರಕರಣದ ಕುರಿತ ಪಣಜಿಯಲ್ಲಿ ಆಯೋಜಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಾವಂತ್- ದೇಶದಿಂದ ಹೊರಗಿರುವ ಗೋವಾದ ಭೂ ಮಾಲೀಕರ ಆಸ್ತಿ ಅಥವಾ ವಾರಸುದಾರರನ್ನು ಹೊದಿರದ ನೋ ಮ್ಯಾನ್ ಆಸ್ತಿಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ನಾವು ಕಾನೂನು ತಿದ್ಧುಪಡಿ ತರುತ್ತೇವೆ. ಮೂಲ ಮಾಲೀಕರು ಅಥವಾ ವಾರಸುದಾರರನ್ನು ಹೊಂದಿರದ ಸುಮಾರು 91 ಆಸ್ತಿಗಳ ನಕಲಿ ದಾಖಲೆ ಸೃಷ್ಠಿಸಿರುವುದು ಬೆಳಕಿಗೆ ಬಂದಿದೆ.

ಇಂತಹ ಆಸ್ತಿಗಳ ಮೇಲೆ ಕಣ್ಣಿಟ್ಟಿರುವ ಗ್ಯಾಂಗ್‍ನ್ನು ಎಸ್‍ಐಟಿ ತಂಡ ಬಂಧಿಸಿದೆ. ಈ ಅಕ್ರಮ ಆಸ್ತಿಗಳ ಸಂಪೂರ್ಣ ಪಟ್ಟಿಯನ್ನು ಗೋವಾರ ಎರಡೂ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಈ ಆಸ್ತಿಯನ್ನು ಖರೀದಿಸುವವರು ಸಂಬಂಧಪಟ್ಟ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next