Advertisement

ಪಣಜಿ: ಚೋರ್ಲಾ ಘಾಟ್‍ನಲ್ಲಿ ಕಂದಕಕ್ಕೆ ಬಿದ್ದ ಕಾರು; ಇಬ್ಬರು ಸ್ಥಳದಲ್ಲೇ ಸಾವು, ನಾಲ್ವರಿಗೆ ಗಾಯ

04:16 PM Dec 02, 2022 | Team Udayavani |

ಪಣಜಿ: ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಚೋರ್ಲಾ ಘಾಟ್‍ನಲ್ಲಿ ಅಪಘಾತ ಸರಣಿ ಮುಂದುವರೆದಿದ್ದು, ಮಹಾರಾಷ್ಟ್ರ ನೋಂದಣಿ ಹೊಂದಿದ ಕಾರೊಂದು ಡಿ.1ರ ರಾತ್ರಿ ಚೋರ್ಲಾ ಘಾಟ್‍ನಲ್ಲಿ ಭೀಕರ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಚೋರ್ಲಾ ಘಾಟ್‍ನಲ್ಲಿ ಕಾರು ಆಳವಾದ ಕಂದಕಕ್ಕೆ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

Advertisement

ಮಹಾರಾಷ್ಟ್ರ ಮೂಲದ ನೂರ್ ಶೇಖ್ ಮತ್ತು ಸುಧೀರ್ ಕುಮಾರ್ ಮೃತಪಟ್ಟವರು.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರಿನಲ್ಲಿ ಸಿಲುಕಿಕೊಂಡಿದ್ದ ನಾಲ್ವರು ಗಾಯಾಳುಗಳನ್ನು ಹೊರತೆಗೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋವಾದ ಚೋರ್ಲಾ ಘಾಟ್‍ನಲ್ಲಿ ಅಪಘಾತಗಳು ನಿಂತಿಲ್ಲ. ನಾನಾ ಅವಘಡಗಳಿಂದ ಈ ಘಾಟ್ ಮೃತ್ಯುಕೂಪವಾಗುತ್ತಿದೆ. ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಅಪಘಾತ ಸಂಭವಿಸುತ್ತಲೇ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next