Advertisement

ಠಾಣೆ ಮೇಲೆ ಪಣಜಿ ಬಿಜೆಪಿ ಶಾಸಕ ದಾಳಿ ಕೇಸ್ : ವಿಚಾರಣೆ ಮಾರ್ಚ್ 7ಕ್ಕೆ

07:42 PM Mar 02, 2022 | Team Udayavani |

ಪಣಜಿ: ನಗರದ ಪೋಲಿಸ್ ಠಾಣೆಯ ಮೇಲೆ 2008 ರಲ್ಲಿ ದಾಳಿ ನಡೆಸಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ಬಾಬುಶ್ ಮೊನ್ಸೆರಾತ್ ಮತ್ತು ಇತರ ಆರೋಪಿಗಳ ವಿಚಾರಣೆಯನ್ನು ನ್ಯಾಯಾಲಯವು ಮಾರ್ಚ್ 7 ಕ್ಕೆ ಮುಂದೂಡಿದೆ.

Advertisement

ಪ್ರಕರಣದಲ್ಲಿನ ಕೆಲ ಆರೋಪಿಗಳು ಸದ್ಯ ವಿದೇಶದಲ್ಲಿದ್ದು,ಇನ್ನು ಕೆಲವರು ಹಾಜರಾಗದ ಕಾರಣ ಮಾಪ್ಸಾ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಶೆರೀನ್ ಪಾಲ್ ಪ್ರಕರಣವನ್ನು ಮುಂದೂಡಿದ್ದಾರೆ.

ಪಣಜಿ ಶಾಸಕ ಅಟಾನಾಸಿಯೋ ಬಾಬೂಶ್ ಮೊನ್ಸೆರಾತ್ ಮತ್ತು ಅವರ ಪತ್ನಿ, ಸಚಿವೆ ಜೆನಿಫರ್ ಮೊನ್ಸೆರಾತ್ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು ಕಳೆದ 7 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸಿಬಿಐ 2014 ರಲ್ಲಿ ಶಾಸಕ ಮೊನ್ಸೆರಾತ್ ಮತ್ತು ಇತರ 35 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

ಮೊನ್ಸೆರಾತ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಪಣಜಿಯಲ್ಲಿ ಸ್ಪರ್ಧಿಸಿದ್ದು, ಮತದಾನ ಮುಕ್ತಾಯವಾಗಿದೆ. ಉತ್ಪಲ್ ಪರ್ರಿಕರ್ ಅವರ ಬಂಡಾಯ ಸ್ಪರ್ಧೆಯ ಬಳಿಕ ಮೊನ್ಸೆರಾತ್ ಭಾರಿ ಸುದ್ದಿಯಾಗಿದ್ದರು. ಉತ್ಪಲ್ ಅವರು ಬಹಿರಂಗವಾಗಿ ಅವರ ಅಭ್ಯರ್ಥಿತನವನ್ನು ವಿರೋಧಿಸಿ ಪಕ್ಷದ ನಿರ್ಧಾರವನ್ನು ಖಂಡಿಸಿ , ಸಾಮಾನ್ಯ ಕಾರ್ಯಕರ್ತನಿಗಾದರೂ ಟಿಕೆಟ್ ನೀಡಿ ಎಂದಿದ್ದರು. ಗೋವಾ ಫಲಿತಾಂಶ ಕ್ಕಿಂತಲೂ ಪಣಜಿ ಕ್ಷೇತ್ರದ ಫಲಿತಾಂಶದ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next