Advertisement

ವಿಕ್ರಾಂತ್‌ ರೋಣ ವಿದೇಶಿ ಹಕ್ಕಿಗೆ 10 ಕೋಟಿ!

12:29 PM May 09, 2022 | Team Udayavani |

ಕನ್ನಡ ಚಿತ್ರರಂಗದಲ್ಲಿ ಮತ್ತೆ ಸ್ಟಾರ್‌ ಸಿನಿಮಾಗಳ ಅಬ್ಬರ ಶುರುವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ “ಕೆಜಿಎಫ್-2′ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದು ಮುನ್ನುಗ್ಗುತ್ತಿದೆ. ಈಗ ಮತ್ತಷ್ಟು ಸ್ಟಾರ್‌ ಸಿನಿಮಾಗಳು ರಿಲೀಸ್‌ ಅಖಾಡಕ್ಕೆ ಧುಮುಕಿವೆ. ಈಗಾಗಲೇ ಕಿಚ್ಚ ಸುದೀಪ್‌ ನಟನೆಯ “ವಿಕ್ರಾಂತ್‌ ರೋಣ’ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಚಿತ್ರ ಜು.28ಕ್ಕೆ ತೆರೆಗೆ ಬರಲಿದೆ. ಇದಕ್ಕೂ ಮುನ್ನ ಚಿತ್ರ ತನ್ನ ಬಿಝಿನೆಸ್‌ನಿಂದ ಸುದ್ದಿ ಮಾಡುತ್ತಿದೆ.

Advertisement

“ವಿಕ್ರಾಂತ್‌ ರೋಣ’ ಚಿತ್ರದ ಓವರ್‌ ಸೀಸ್‌ (ವಿದೇಶಿ)ರೈಟ್ಸ್‌ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಮೂಲಗಳ ಪ್ರಕಾರ, 10 ಕೋಟಿ ರೂಪಾಯಿಗೆ ಮಾರಾಟವಾಗಿದ್ದು, “ಒನ್‌ ಟ್ವೆಂಟಿ 8 ಮೀಡಿಯಾ’ ಇದನ್ನು ಪಡೆದುಕೊಂಡಿದೆ.

ಈ ಬಗ್ಗೆ ಮಾತನಾಡುವ ನಿರ್ಮಾಪಕ ಜಾಕ್‌ ಮಂಜುನಾಥ್‌, “ಸಿನಿಮಾದ ಕಂಟೆಂಟ್‌ ಯೂನಿವರ್ಸಲ್‌ ಆಗಿರಬೇಕು ಎಂಬುದನ್ನು ನಾನು ಯಾವಾಗಲೂ ನಂಬಿಕೊಂಡು ಬಂದಿದ್ದೇನೆ. ಭಾವನೆಗಳು ಪ್ರಪಂಚದಾದ್ಯಂತ ಒಂದೇ ಸ್ವರ ಮತ್ತು ತಾಳದಲ್ಲಿ ಕೂರುತ್ತದೆ. ಅದೇ ಕಾರಣದಿಂದ ಓವರ್‌ ಸೀಸ್‌ ರೈಟ್ಸ್‌ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಬಿಡುಗಡೆಗೂ ಮುನ್ನವೇ ಓವರ್‌ ಸೀಸ್‌ ಔಟ್‌ರೇಟ್‌ ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ’ ಎನ್ನುತ್ತಾರೆ.

ಅನೂಪ್‌ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್‌ ನಟನೆಯ “ವಿಕ್ರಾಂತ್‌ ರೋಣ’ ಜುಲೈ 28 ರಂದು ವಿಶ್ವಾದ್ಯಂತ 3ಡಿ ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜಾಕ್ವೆಲಿನ್‌ ಫ‌ರ್ನಾಂಡೀಸ್‌, ನಿರೂಪ್‌ ಭಂಡಾರಿ ಮತ್ತು ನೀತಾ ಅಶೋಕ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next