ಬೆಂಗಳೂರು: ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಆರ್.ಚಂದ್ರು ಅವರ ಪ್ಯಾನ್ ಇಂಡಿಯಾ ʼಕಬ್ಜʼ ಸಿನಿಮಾ ರಿಲೀಸ್ ಡೇಟ್ ಹೊರ ಬಿದ್ದಿದೆ. 70ರ ದಶಕದಲ್ಲಿನ ರೆಟ್ರೋ ಕಥೆಯನ್ನು ರೌಡಿಸಂ ಹಿನ್ನೆಲೆಯ ಕಥೆಯನ್ನಿಟ್ಟುಕೊಂಡು ಹೇಳಿರುವ ʼಕಬ್ಜʼದಲ್ಲಿ ಉಪ್ಪಿ ಡಿಫ್ರೆಂಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಟೀಸರ್ ರಿಲೀಸ್ ಮಾಡಿ ಕೇವಲ ಕೆಲ ಗಂಟೆಗಳಲ್ಲೇ ವರ್ಲ್ಡ್ ವೈಡ್ ಹವಾ ಸೃಷ್ಟಿಸಿದ ʼಕಬ್ಜʼ ಉಪ್ಪಿ – ಆರ್.ಚಂದ್ರು ಕಾಂಬಿನೇಷನ್ ನ ಬಹು ನಿರೀಕ್ಷಿತ ಸಿನಿಮಾ. ಟೀಸರ್ ನಲ್ಲಿ ಕಾರಿನಿಂದ ಇಳಿದು ಮಚ್ಚು ಹಿಡಿದು ಬಂದ ರಿಯಲ್ ಸ್ಟಾರ್ ಇದೀಗ ಥಿಯೇಟರ್ ಗೆ ಯಾವಾಗ ಬರುತ್ತಾರೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.
ಮಾರ್ಚ್ 17 ರಂದು ವಿಶ್ವದಾದ್ಯಂತ ʼಕಬ್ಜʼ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರ ತಂಡ ಪೋಸ್ಟರ್ ರಿಲೀಸ್ ಮಾಡಿ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಿದೆ. ಈ ದಿನದ ವಿಶೇಷವೆಂದರೆ ಮಾರ್ಚ್ 17 ರಂದು ಪವರ್ ಸ್ಟಾರ್ ಅಪ್ಪು ಅವರ ಹುಟ್ಟುಹಬ್ಬವಿದೆ. ಇದಲ್ಲದೇ ಯುಗಾದಿ ಹಬ್ಬದ ಸಮೀಪದ ದಿನದಲ್ಲೇ ಚಿತ್ರ ರಿಲೀಸ್ ಆಗಲಿದೆ.
ʼಕೆಜಿಎಫ್ -2ʼ, ʼ777 ಚಾರ್ಲಿʼ,ʼವಿಕ್ರಾಂತ್ ರೋಣʼ, ʼಕಾಂತಾರʼದ ಬಳಿಕ ಕನ್ನಡದಲ್ಲಿ ರಿಲೀಸ್ ಗೂ ಮುನ್ನ ಸದ್ದು ಮಾಡಿರುವ ಸಿನಿಮಾದಲ್ಲಿ ʼಕಬ್ಜʼ ಸಿನಿಮಾವೂ ಒಂದು.
Related Articles
ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದು, ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, ‘ಕೆಜಿಎಫ್’ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.