Advertisement

ಬಲು ಅಪರೂಪದ ಅವಳಿ ಶ್ರೀತಾಳೆ ಮರ ಪತ್ತೆ

04:47 PM Feb 16, 2022 | Team Udayavani |

ಹಿರಿಯಡಕ: ಹಿರಿಯಡಕ ವ್ಯಾಪ್ತಿಯ ಅಂಜಾರಿನ ಅರಣ್ಯ ಪ್ರದೇಶದಲ್ಲಿ ಅವಳಿ ಶ್ರೀತಾಳೆಮರ ಪತ್ತೆಯಾಗಿದೆ. ವಿಶ್ವದಲ್ಲಿಯೇ ಶ್ರೀತಾಳೆ ಮರ ಅವನತಿ ಅಂಚಿನಲ್ಲಿದೆ. ಇಂತಹ ಶ್ರೀತಾಳೆಮರ ಆತ್ರಾಡಿ ಬಳಿ ಹೂಬಿಟ್ಟ ಸಂದರ್ಭದಲ್ಲಿ ಗೋಚರವಾಗಿದ್ದು, ಹೆಚ್ಚಿನವರು ತಾಳಿಬೊಂಡ ಮರ ಎಂದು ತಿಳಿದುಕೊಂಡಿದ್ದರು. ಆದರೆ ಈ ಶ್ರೀತಾಳೆ ಮರವು ವಿಭಿನ್ನವಾಗಿದೆ.

Advertisement

ಹಚ್ಚಹಸುರು ಇರುವ ಎಲೆಗಳ ಮೂಲಕ ಈ ಮರದ ಕುರುಹು ಪತ್ತೆ ಹಚ್ಚಬಹುದು. ಈ ಮರ ದೊಡ್ಡದಾಗಿ ಬೆಳೆಯುವ ಹಂತದಲ್ಲಿ ಗುರುತು ಮಾಡಬಹುದು.

ಇಂತಹ ಮರಗಳನ್ನು ರಕ್ಷಿಸಲು ಶ್ರೀಗಂಧದ ಮರಕ್ಕೆ ಸರಕಾರ ಭದ್ರತೆ ಒದಗಿಸಿದಂತೆ ಇದಕ್ಕೂ ಒದಗಿಸಬೇಕು. ಈ ಮರ 60-70 ವರ್ಷ ಬೆಳೆದು ಹೂ ಬಿಟ್ಟು ಕಾಯಿಯಾಗಿ ಸಾಯುತ್ತದೆ. ಹೂ ಬಿಡುವ ಸಂದರ್ಭದಲ್ಲಿ ಇದನ್ನು ಕಡಿಯುತ್ತಿರುವುದು ಕಂಡುಬರುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಕಾರ್ಯಗಳಾಗಬೇಕು ಎಂದು ಪರಿಸರಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next