ಕುಷ್ಟಗಿ: ಕುಷ್ಟಗಿಯ ಕೃಷ್ಣಗಿರಿ ಕಾಲೋನಿಯ ಹೊರವಲಯದಲ್ಲಿ ಜೋಪಡಿಯಲ್ಲಿ ವಾಸವಾಗಿದ್ದ ಪಲ್ಲವಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.
ಮನೆ ಇಲ್ಲದೇ ಅತಂತ್ರರಾಗಿದ್ದ ಬಡ ಕುಟುಂಬದ ಪಲ್ಲವಿ ತಂದೆ ಇಲ್ಲ. ತಾಯಿಯೊಂದಿಗೆ ಕೃಷ್ಣಗಿರಿ ಕಾಲೋನಿ ಹೊರವಲಯದಲ್ಲಿ ಜೋಪಡಿಯಲ್ಲಿ ಕುಟುಂಬ ವಾಸವಾಗಿದ್ದರು.
ಜೀವನೋಪಾಯಕ್ಕೆ ಸ್ಥಳೀಯ ಬ್ಯಾಂಜಿಯೋ ಹಸನ್ ಸಾಬ್ ಅವರ ಪುಟಪಾತ್ ಇಡ್ಲಿ ಸೆಂಟರ್ ನಲ್ಲಿ ಕೆಲಸಕ್ಕೆ ಇದ್ದಳು. ಪಲ್ಲವಿಯನ್ನು ವರಿಸಿದ ಯುವಕ ಅಮೀನಗಡ ಶಹರದ ಕ್ರೂಷರ್ ಚಾಲಕ ವೀರಣ್ಣ ಕಟಗಿ ಗೆ, ಈತನಿಗೆ ತಂದೆ-ತಾಯಿ ಇಲ್ಲ. ಸಹೋದರು ಈತನೊಂದಿಗೆ ಇಲ್ಲದೇ ಒಬ್ಬಂಟಿ ಜೀವನ ನಡೆಸುತ್ತಿದ್ದ. ಈತನ ಪೂರ್ವಪರ ವಿಚಾರಿಸಿದ್ದ ಸ್ಥಳೀಯರು, ಇಲ್ಲಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ವೀರಣ್ಣ ಹಾಗೂ ಪಲ್ಲವಿ ಹಸೆ ಮಣೆ ಏರಿದರು.
ಇವರ ವಿವಾಹ ಕಾರ್ಯಕ್ರಮ ಅತ್ಯಂತ ಸರಳವಾಗಿ, ಸಂಪ್ರದಾಯ ಪ್ರಕಾರ ಶಾಸ್ತ್ರೋಕ್ತ ಮದುವೆ ಕಾರ್ಯಕ್ರಮ ನಡೆಯಿತು. ಇವರಿಬ್ಬರ ಜಾತಿ ಬೇರೆ ಬೇರೆಯಾದರೂ, ಅನಾಥರು ಎನ್ನುವ ಭಾವನೆ ಬರದಂತೆ ಸ್ಥಳೀಯರು ಮದುವೆ ಖರ್ಚು ವೆಚ್ಚ ಸರಿದೂಗಿಸಿಕೊಂಡು, ಮದುವೆ ಮಾಡಿಸಿರುವುದು ವಿಶೇಷ ಎನಿಸಿತು.
ಪುರಸಭೆ ಸದಸ್ಯ ವಸಂತ ಮೇಲಿನಮನಿ, ವಜೀರ ಗೋನಾಳ, ಹಸನಸಾಬ ಬ್ಯಾಂಜೊ, ದುರಗಪ್ಪ ಜರಗಡ್ಡಿ, ಶರಣಪ್ಪ ಶಿವನಗುತ್ತಿ ಮರಿಯಪ್ಪ ಹಕ್ಕಲ,ಮಂಜುನಾಥ ಕಟ್ಟಿಮನಿ ಮೊದಲಾದವರು ಈ ವಿಶೇಷ ಮದುವೆಗೆ ಸಾಕ್ಷೀಯಾದರು.
ಇದನ್ನೂ ಓದಿ : ವಜಾಗೊಂಡಿದ್ದ100 ಜನ ನೌಕರರ ಮರು ನೇಮಕಾತಿ : ಸಾರಿಗೆ ಸಚಿವ ಬಿ.ಶ್ರೀರಾಮುಲು