ಪಡುಬಿದ್ರಿ : ಪಲಿಮಾರು ಗ್ರಾಮದ ಅವರಾಲು ಮಟ್ಟುವಿನ ಪಾಳುಬಿದ್ದ ಗದ್ದೆಯ ಬದಿಯಲ್ಲಿ ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಏಳು ಮಂದಿಯನ್ನು ವಶಕ್ಕೆ ತೆಗೆದುಕೊಂಡ ಘಟನೆ ಮಾ. 25ರಂದು ನಡೆದಿದೆ.
Advertisement
ಸತೀಶ್, ಪದ್ಮನಾಭ, ಪ್ರಭಾಕರ, ವಸಂತ್, ಜಗದೀಶ್, ಶಂಕರ್ ಮತ್ತು ಸಾಧು ಬಂಧಿತರು. ಬಂಧಿತರಿಂದ 14,900 ರೂ. ನಗದು ವಶಪಡಿಸಿಕೊಳ್ಳಾಲಾಗಿದೆ.
ಪಡುಬಿದ್ರಿ ಎಸ್‌ಐ ಪುರುಷೋತ್ತಮ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.