Advertisement

ಪಾಲ್ಘರ್ ಸಾಧುಗಳ ಹತ್ಯೆ ಕೇಸ್ ಸಿಬಿಐಗೆ ಒಪ್ಪಿಸಿದ ಮಹಾರಾಷ್ಟ್ರ ಸರಕಾರ

09:22 PM Oct 11, 2022 | Team Udayavani |

ಮುಂಬಯಿ: ಪಾಲ್ಘರ್ ಜಿಲ್ಲೆಯಲ್ಲಿ ಇಬ್ಬರು ಸಾಧುಗಳು ಸೇರಿದಂತೆ ಮೂವರನ್ನು ಗುಂಪೊಂದು ಹತ್ಯೆಗೈದ ಸುಮಾರು ಎರಡೂವರೆ ವರ್ಷಗಳ ನಂತರ, ಮಹಾರಾಷ್ಟ್ರ ಗೃಹ ಇಲಾಖೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಿದೆ.

Advertisement

ಈ ಪ್ರಕರಣವನ್ನು ಈ ಹಿಂದೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆ ನಡೆಸುತ್ತಿತ್ತು ಈ ಬೆಳವಣಿಗೆಯನ್ನು ಗೃಹ ಸಚಿವ ದೇವೇಂದ್ರ ಫಡ್ನವೀಸ್ ಪಿಟಿಐಗೆ ಖಚಿತಪಡಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ಮಧ್ಯೆ 2020 ಏಪ್ರಿಲ್ 16 ರಂದು ರಾತ್ರಿ ಗಡ್ಚಿಂಚ್ಲೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಇಬ್ಬರು ಸಾಧುಗಳು ಮುಂಬೈನಿಂದ ಸೂರತ್‌ಗೆ ಕಾರಿನಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ತೆರಳುತ್ತಿದ್ದರು. ಕೆಲವು ಪೊಲೀಸ್ ಸಿಬಂದಿ ಸ್ಥಳಕ್ಕೆ ಆಗಮಿಸಿದ ನಂತರವೂ ಗ್ರಾಮಸ್ಥರ ಗುಂಪೊಂದು ಅವರನ್ನು ತಡೆದು ಮಕ್ಕಳ ಕಳ್ಳರೆಂದು ಶಂಕಿಸಿ ಥಳಿಸಿ ಕೊಂದಿತ್ತು.

ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ, ಧಾರ್ಮಿಕ ಮುಖಂಡರ ಮೇಲಿನ ದಾಳಿಯ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿ ಸಿಬಿಐ ತನಿಖೆಗೆ ಆಗ್ರಹಿಸಿತ್ತು. ಆಗಿನ ಗೃಹ ಸಚಿವ ಅನಿಲ್ ದೇಶಮುಖ್ ಅವರು ಬೇಡಿಕೆಯನ್ನು ವಿರೋಧಿಸಿದ್ದರು, ಕೆಲವು ಗ್ರಾಮಸ್ಥರು ಅವರನ್ನು ಮಕ್ಕಳ ಕಳ್ಳಸಾಗಣೆದಾರರು ಎಂದು ತಪ್ಪಾಗಿ ಭಾವಿಸಿದ್ದರಿಂದ ಈ ಹತ್ಯೆ ನಡೆದಿದೆ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next