Advertisement

ಪಾಲ್ಘರ್‌:ಗಮನ ಸೆಳೆದ ನೃತ್ಯೋತ್ಸವ”ಲಾಸ್ಯ ಅಭಿನಯ -2017

11:59 AM Sep 06, 2017 | |

ನೃತ್ಯ ಕಲಾವಿದೆ ದೀಪಾ ಶೆಟ್ಟಿ ಅವರು “ಡಾನ್ಸ್‌ ಸ್ಟುಡಿಯೋ ಪಾಲ^ರ್‌’ ಎನ್ನುವ ನೃತ್ಯಾಭ್ಯಾಸ ಸಂಸ್ಥೆಯನ್ನು 2016ರಲ್ಲಿ ಆರಂಭಿಸಿದ್ದು, ಇದರ ಪ್ರಥಮ ವಾರ್ಷಿಕೋತ್ಸವ “ಲಾಸ್ಯ ಅಭಿನಯ-2017′ ಸಂಭ್ರಮವು ಇತ್ತೀಚೆಗೆ ಪಾಲ್ಘರ್‌ನ ಲಯನ್ಸ್‌ ಕ್ಲಬ್‌ಹಾಲ್‌ನಲ್ಲಿ  ಅದ್ದೂರಿಯಾಗಿ ನಡೆಯಿತು.

Advertisement

ನಾಲ್ಕರಿಂದ 61 ವರ್ಷದವರೆಗಿನ ವಯೋಮಾನದ ಕಲಾವಿದರು ಈ ನೃತ್ಯೋತ್ಸವದಲ್ಲಿ ಭಾಗವಹಿಸಿ ವಿವಿಧ ನೃತ್ಯ ಪ್ರಕಾರಗಳಾದ ಭಾರತನಾಟ್ಯಂ, ಕಥಕ್‌, ಹಿಪ್‌ಹಾಪ್‌, ಬಾಲಿವುಡ್‌ ನೃತ್ಯಗಳನ್ನು ಪ್ರದರ್ಶಿಸಿ ಕಲಾಭಿಮಾನಿಗಳ ಗಮನ ಸೆಳೆದರು. ಕಾರ್ಯಕ್ರಮವನ್ನು ಆಯೋಜಿಸಲು ನೆರವಾದ ಪ್ರಾಯೋಜಕರಾದ ಪುಣೆ ಬಂಟರ ಸಂಘದ ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ್‌  ಶೆಟ್ಟಿ  ನಿಟ್ಟೆ, ರಘುರಾಮ ರೈ ಬೊಯಿಸರ್‌, ದರ್ಶನ್‌ ಶೆಟ್ಟಿ ಖಾರ್‌ಘರ್‌, ಅಶೋಕ್‌ ಕೆ. ಶೆಟ್ಟಿ, ಸುರೇಂದ್ರ ಕೆ. ಶೆಟ್ಟಿ, ವಿಜಯ್‌ ಶೆಟ್ಟಿ, ಪ್ರವೀಣ್‌ ಶೆಟ್ಟಿ, ರವೀಂದ್ರ ಶೆಟ್ಟಿ, ತಾರಾನಾಥ ಶೆಟ್ಟಿ, ಮಹಾಬಲ ಶೆಟ್ಟಿ, ಡಾ| ಮನೋಹರ್‌ ಕಾಮತ್‌ ಮತ್ತು ರಮೇಶ್‌  ಶೆಟ್ಟಿ ಪಾಲ^ರ್‌ ಈ ಸಂದರ್ಭದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು.

ಅತಿಥಿ-ಗಣ್ಯರನ್ನು ಸಂಸ್ಥೆಯ ವತಿಯಿಂದ ದೀಪಾ ಶೆಟ್ಟಿ  ಅವರು ಸಮ್ಮಾನಿಸಿದರು.  ಪ್ರಾರಂಭದಲ್ಲಿ ಹತ್ತು ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಸಂಸ್ಥೆಯಲ್ಲಿ ಇದೀಗ 95 ಕಲಾವಿದರು ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಆರತಿ ನಿಖೀಲ್‌ ಶೆಟ್ಟಿ, ನಿಖೀಲ… ಜಾಧಲ್‌, ದೀಕ್ಷಿತ್‌ ಶೆಟ್ಟಿ, ತೇಜಲ… ಜೈನ್‌, ನೂತನ್‌ ವರ್ತಕ್‌, ಅಂಜಲಿ ಲಿಂಬೋಲ ಮತ್ತು ಇಷಿಕಾ ಶೆಟ್ಟಿ ಅವರು ನೃತ್ಯ ತರಬೇತಿಯನ್ನು ನೀಡುತ್ತಿದ್ದಾರೆ. ಒಟ್ಟಿನಲ್ಲಿ ವೈವಿಧ್ಯತೆಯಿಂದ ಕೂಡಿದ ಈ ಕಾರ್ಯಕ್ರಮವು ಕಲಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next