Advertisement

20 ಲಕ್ಷ ರೂ. ಮೌಲ್ಯದ ಗೋಮಾಂಸ ವಶ

07:21 PM Dec 04, 2021 | Team Udayavani |

ಮುಂಬೈ: ತಮಿಳುನಾಡಿನಿಂದ ಮಹಾರಾಷ್ಟ್ರಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದ್ದ 20 ಲಕ್ಷ ರೂ. ಮೌಲ್ಯದ ಗೋ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶನಿವಾರದಂದು ಪೊಲೀಸರು ತಿಳಿಸಿದ್ದಾರೆ.

Advertisement

ಕಂಟೇನರ್‌ ಲಾರಿಯೊಂದರಲ್ಲಿ 21,018ಕೆಜಿ ಗೋ ಮಾಂಸವನ್ನು ತಮಿಳುನಾಡಿನಿಂದ ಮುಂಬೈ- ಅಹಮದಾಬಾದ್‌ ಹೆದ್ದಾರಿ ಮುಖಾಂತರ ಮಂಗಳವಾರ ಸಂಜೆ ವೇಳೆ ಸಾಗಿಸಲಾಗುತ್ತಿತ್ತು. ಪಾಲ್ಘಾರ್‌ ಜಿಲ್ಲೆಯಲ್ಲಿ ಪೊಲೀಸರು ಆ ಲಾರಿಯನ್ನು ತಡೆದು, ಪರಿಶೀಲನೆ ನಡೆಸಿದಾಗ ಅದರಲ್ಲಿ ಗೋಮಾಂಸ ಇದ್ದದ್ದು ಕಂಡುಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತಮಿಳುನಾಡು ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next