Advertisement

ಪಾಲೆಮಾರ್‌ ಅವಧಿಯ 8 ಕೋಟಿ ರೂ. ಏನಾಗಿದೆ: ಮೊದಿನ್‌ ಬಾವಾ ಪ್ರಶ್ನೆ

03:33 PM Mar 31, 2017 | Team Udayavani |

ಲಾಲ್‌ಬಾಗ್‌: ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಅವರು ಅಧಿಕಾರದಲ್ಲಿದ್ದಾಗ ಸುರತ್ಕಲ್‌ ಮಾರುಕಟ್ಟೆ ಅಭಿವೃದ್ಧಿ ಹಾಗೂ ರಸ್ತೆಗೆ ಸರಕಾರದ 8 ಕೋಟಿ ರೂ.ಗಳನ್ನು ಬಳಸಿರುವುದಾಗಿ ಹೇಳಿದ್ದಾರೆ. ಆದರೆ ಅಂತಹ ಯಾವುದೇ ಅಭಿವೃದ್ಧಿ ಅಲ್ಲಿ ನಡೆದಿಲ್ಲ. ಅವರು ಆ ಹಣವನ್ನು ಏನು ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಶಾಸಕ ಮೊದಿನ್‌ ಬಾವಾ ಆಗ್ರಹಿಸಿದ್ದಾರೆ.

Advertisement

ಪಾಲಿಕೆ ಕಟ್ಟಡದಲ್ಲಿರುವ ತನ್ನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸುರತ್ಕಲ್‌ನ ಗೋಮಾಳ ಜಾಗದಲ್ಲಿ ತಾನು ನಿರ್ಮಿಸುತ್ತಿರುವ ತಾತ್ಕಾಲಿಕ ಮಾರುಕಟ್ಟೆಯನ್ನು ಚುನಾವಣ ಗಿಮಿಕ್‌ ಎಂಬುದಾಗಿ ಪಾಲೆಮಾರ್‌ ಆರೋಪಿಸುತ್ತಾರೆ. ಅಂತಹ ಯಾವುದೇ ಗಿಮಿಕ್‌ ನನ್ನಲ್ಲಿಲ್ಲ. ಆದರೆ ಅವರ ಅವಧಿಯಲ್ಲಿ ಮಾರುಕಟ್ಟೆ ಅಭಿವೃದ್ಧಿಗೆಂದು ತಂದ ಹಣವನ್ನು ಏನು ಮಾಡಿದ್ದಾರೆಂಬ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.  

ಗೋಮಾಳ ಜಾಗದಲ್ಲಿ ಈಗಾಗಲೇ ಕಂದಾಯ ನಿರೀಕ್ಷಕರ  ಕಚೇರಿ  ಮೊದಲಾದ  ಶಾಶ್ವತ ಕಟ್ಟಡಗಳಿವೆ. ಅದನ್ನು ಕಟ್ಟುವಾಗ  ಅವರಿಗೆ ಗೋಮಾಳ ಜಾಗ ಎಂದು ಗೊತ್ತಿರಲಿಲ್ಲವೇ? ಈಗ ತಾನು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸಲಾಗದೆ ಮಾಡುತ್ತಿರುವ  ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.

ಸುರತ್ಕಲ್‌ನಲ್ಲಿ ಸುಸಜ್ಜಿತ ಮಾರುಕಟ್ಟೆ ಇಲ್ಲದೆ ವ್ಯಾಪಾರಿಗಳು ಪರದಾ ಡುವಂತಾಗಿದೆ. ಇಲ್ಲಿ ಮೈದಾನ, ಮುಡಾ  ವಾಣಿಜ್ಯ ಸಂಕೀರ್ಣ, ಮನಪಾ ಮಾರುಕಟ್ಟೆ, ರಸ್ತೆ ನಿರ್ಮಾಣಕ್ಕಾಗಿ 120 ಕೋಟಿ ರೂ. ವೆಚ್ಚದಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕಾರ್ಯಗತ ಮಾಡಲು ಸಿದ್ಧರಿದ್ದೇವೆ ಎಂದರು.

ಧಾರ್ಮಿಕ ಸಂಸ್ಥೆಗಳಿಗೆ 20 ಲಕ್ಷ ರೂ.
ಮಾರ್ಚ್‌ ತಿಂಗಳಿನಲ್ಲಿ ಶ್ರೀ ಮುಕ್ಕ ಸತ್ಯಧರ್ಮದೇವಿ ದೇವಸ್ಥಾನ, ಪಂಜಿ ಮೊಗರು, ವಿದ್ಯಾನಗರ ಶ್ರೀ ಕೃಷ್ಣ ಮಂದಿರ, ಕಾಟಿಪಳ್ಳ, ಕೈಕಂಬ ಶ್ರೀ ನಿತ್ಯಾ ನಂದ ಭಜನ  ಮಂದಿರ, ಕಾಟಿಪಳ್ಳ ಶ್ರೀ ರಾಮಾಂಜನೇಯ ಭಜ ನ ಮಂದಿರ, ಇಡ್ಯಾ ಗುಡ್ಡಕೊಪ್ಪಳ ಶ್ರೀ ರಾಮ ಮಂದಿರಕ್ಕೆ ತಲಾ 4 ಲಕ್ಷ ರೂ. ಸೇರಿ ಒಟ್ಟು 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಬಾವಾ ತಿಳಿಸಿದರು.ಕಾರ್ಪೊರೇಟರ್‌   ಬಶೀರ್‌ ಅಹಮ್ಮದ್‌, ಮಾಜಿ ಕಾರ್ಪೊರೇಟರ್‌ ಹರೀಶ್‌, ಜಿ.ಪಂ ಮಾಜಿ ಸದಸ್ಯ ಕೃಷ್ಣ ಅಮೀನ್‌, ಕುಪ್ಪೆಪದವು ಗ್ರಾಪಂ ಸದಸ್ಯ ಹಿರಣಾಕ್ಷ ಕೋಟ್ಯಾನ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next