ಹನೂರು : ಅರಣ್ಯ ಇಲಾಖೆಯ ನೌಕರನೋರ್ವ ಕುಡಿದ ಮತ್ತಿನಲ್ಲಿ ಕರ್ತವ್ಯ ನಿರ್ವಹಿಸಿ, ಕೇಳಿದಷ್ಟು ಹಣ ನೀಡದಿದ್ದಲ್ಲಿ ಬಂದೂಕಿನಿಂದ ಸುಟ್ಟು ಹಾಕುವುದಾಗಿ ಬೆದರಿಕೆಯೊಡ್ಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ವೈರಲ್ ಆಗಿರುವ ವಿಡಿಯೋ ಕರ್ನಾಟಕ – ತಮಿಳುನಾಡು ರಾಜ್ಯಗಳ ಗಡಿಭಾಗದ ಪಾಲಾರ್ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆಯ ನೌಕರ ಮೋಹನ್ ಅವರದ್ದು ಎನ್ನಲಾಗಿದೆ. ಈತ ಪಾನಮತ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಚೆಕ್‍ಪೋಸ್ಟ್ ಬಳಿ ಬಂದ ಲಾರಿಯೊಂದರ ಚಾಲಕ ಮತ್ತು ಕ್ಲೀನರ್ ನಡುವೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ಈ ವೇಳೆ ಲಾರಿಯ ಚಾಲಕ ಈಗಾಗಲೇ 30ರೂ ನೀಡಿದ್ದೀನಲ್ಲ ಎಂದಿದ್ದಾನೆ. ಇದರಿಂದ ಕುಪಿತನಾದ ಮೋಹನ್ ಲಾರಿಯ ಕ್ಲೀನರ್‍ನನ್ನು ನಿನ್ನ ಹೆಸರು ಏನು ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಕ್ಲೀನರ್ ಸೈಯದ್ ಯಾಸಿನ್ ಎಂದು ಉತ್ತರಿಸಿದ್ದು , ನೀವು ಬಗ್ಗುವುದಿಲ್ಲವೇ? ಮುತ್ತಯ್ಯ ಅವರು ಇದ್ದರೆ ಬಗ್ಗುತ್ತೀರಾ ಎಂದು ಮರು ಪ್ರಶ್ನಿಸಿದ್ದಾನೆ. ಏನು ಮಾಡಿಕೊಳ್ಳಲು ಆಗುವುದಿಲ್ಲ ಅಂತ ನೀವು ಹೇಳಿ ನಾಳೇ ನಾನು ಮಾಡದಿದ್ದರೆ ನಾನು ಅಪ್ಪನಿಗೆ ಹುಟ್ಟಿದವನೇ ಅಲ್ಲ ಎಂದು ಅವ್ಯಚ್ಚ ಶಬ್ದದಿಂದ ಬೈದು. ಎತ್ತಿಕೊಂಡು ಬನ್ನಿ ಬಂದೂಕನ್ನು ಸುಟ್ಟಿಹಾಕುಬಿಡುತ್ತೇನೆ ಎಂದು ಲಾರಿಯ ಚಾಲಕ ಮತ್ತು ಕ್ಲೀನರ್ ನಿಗೆ ಧಮ್ಕಿ ಹಾಕಿದ್ದಾನೆ.
ಇದನ್ನೂ ಓದಿ : ಕಾಂಗ್ರೆಸ್ ನವರು ಈಗಾಗಲೇ ಅಧಿಕಾರಕ್ಕೆ ಬಂದೆವೆಂಬ ಭ್ರಮೆಯಲ್ಲಿದ್ದಾರೆ: ಯಡಿಯೂರಪ್ಪ
ಅರಣ್ಯ ನೌಕರನ ಧಮ್ಕಿಗೆ ಮರು ಉತ್ತರಿಸಿದ ಲಾರಿ ಚಾಲಕ ಮತ್ತು ಕ್ವೀನರ್ ಸುಟ್ಟುಹಾಕ್ರಿ ನೀವು ಬಂದೂಕು ತಂದು ಕೊಡಿ ಅವರಿಗೆ ಎಂದು ಹೇಳಿದ್ದಾರೆ, ಅದಕ್ಕೆ ಪ್ರತಿಕ್ರಿಯಿಸಿದ ಮೋಹನ ಸಮವಸ್ತ್ರದಲ್ಲಿ ಇರುವವನ ಮೇಲೆ ಕೈ ಮಾಡುತ್ತೀರಾ ಎಂದು ಗದರಿಸಿದ್ದಾನೆ. ಬಳಿಕ 100, 200 ಕೊಟ್ಟು ಹೋಗಿ ಎಂದು ಮೋಹನ ಹೇಳಿದ್ದಾನೆ. ಅದಕ್ಕೆ ಏಕೆ ಕೊಡಬೇಕು ಎಂದು ಪ್ರಶ್ನಿಸಿದ್ದಕ್ಕೆ ಫಾರ್ಮಲಿಟಿಗೆ ಎಂದು ತಿಳಿಸಿದ್ದಾನೆ.
ಒಟ್ಟಾರೆ ಈ ವಿಡಿಯೋ ಕರ್ನಾಟಕ – ತಮಿಳುನಾಡು ಗಡಿಯ ಪಾಲಾರ್ ಚೆಕ್‍ಪೋಷ್ಟ್‍ನಲ್ಲಿ ಸಂಚರಿಸುವ ಲಾರಿಗಳಿಂದ ಹಣ ವಸೂಲು ಮಾಡುವ ವಿಚಾರಕ್ಕೆ ಸಂಬಂಧಪಟ್ಟದ್ದು ಎನ್ನಲಾಗಿದ್ದು ಅರಣ್ಯ ಇಲಾಖೆ ನೌಕರನ ವರ್ತನೆ ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.