Advertisement

Palanpur: ರಸ್ತೆ ಬದಿ ನಮಾಜ್‌; ಟ್ರಕ್‌ ಚಾಲಕ ಸೆರೆ

12:14 AM Jan 15, 2024 | Team Udayavani |

ಪಲಾನ್ಪುರ್‌: ವಾಹನ ದಟ್ಟಣೆಯಿರುವ ರಸ್ತೆಯೊಂದರ ಬದಿಯಲ್ಲಿ “ನಮಾಜ್‌’ ಮಾಡಿದ ಟ್ರಕ್‌ ಚಾಲಕನನ್ನು ಬಂಧಿಸಿದ ಘಟನೆ ಗುಜರಾತ್‌ನ ಬನಸ್ಕಾಂತಾ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಪಲಾನ್ಪುರ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಿರುವಂಥ ರಸ್ತೆಯ ಪಕ್ಕದಲ್ಲೇ ಟ್ರಕ್‌ ನಿಲ್ಲಿಸಿದ ಚಾಲಕ ಬಚಾಲ್‌ ಖಾನ್‌(37) ಅಲ್ಲೇ ನಮಾಜ್‌ ಮಾಡುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

Advertisement

ಈ ಹಿನ್ನೆಲೆಯಲ್ಲಿ ಕೇಸು ದಾಖಲಿಸಿಕೊಂಡು ಪೊಲೀಸರು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಹಾಗೂ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದಲ್ಲಿ  ಖಾನ್‌ನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next