Advertisement

ಪಾಲಕ್ಕಾಡ್‌ ಹಳಿ ಕಾಮಗಾರಿ: ಹಲವು ರೈಲುಗಳ ಸೇವೆ ವ್ಯತ್ಯಯ

11:29 PM May 15, 2023 | Team Udayavani |

ಮಂಗಳೂರು: ಪಾಲಕ್ಕಾಡ್‌ ವಿಭಾಗದ ವಿವಿಧ ಕಡೆಗಳಲ್ಲಿ ಎಂಜಿನಿಯರಿಂಗ್‌ ಕೆಲಸದ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

Advertisement

ನಂ. 12618 ಹಝರತ್‌ ನಿಜಾಮುದ್ದೀನ್‌ – ಎರ್ನಾಕುಳಂ ಮಂಗಳಾ ಲಕ್ಷದ್ವೀಪ್‌ ಎಕ್ಸ್‌ಪ್ರೆಸ್‌ ರೈಲನ್ನು ಮೇ 17, 18, 19, 21, 22, 23, 24, 25, 26, 28, 29, 30 ಮತ್ತು 31ರಂದು 70 ನಿಮಿಷ ಕಾಲ ನಿಯಂತ್ರಿಸಲಾಗುವುದು.

ನಂ. 22638 ಮಂಗಳೂರು ಸೆಂಟ್ರಲ್‌-ಚೆನ್ನೈ ಸೆಂಟ್ರಲ್‌ ವೆಸ್ಟ್‌ ಕೋಸ್ಟ್‌ ಎಕ್ಸ್‌ಪ್ರೆಸ್ಸನ್ನು 60 ನಿಮಿಷ ಕಾಲ ಮೇ 16, 18, 19, 21, 22, 23, 24, 25, 26, 28, 29, 30 ಮತ್ತು 31ರಂದು ನಿಯಂತ್ರಿಸಲಾಗುವುದು.

ನಂ. 12484 ಅಮೃತಸರ ಕೊಚ್ಚುವೇಲಿ ಎಕ್ಸ್‌ಪ್ರೆಸ್‌ ಸಾಪ್ತಾಹಿಕ ರೈಲನ್ನು ಮೇ 16, 23, 30ರಂದು 40 ನಿಮಿಷ ಕಾಲ, ನಂ. 1633ರ ನಾಗರಕೋವಿಲ್‌ ಜಂಕ್ಷನ್‌ ಗಾಂಧಿ ಧಾಮ್‌ ಎಕ್ಸ್‌ಪ್ರೆಸ್‌ ರೈಲನ್ನು ಮೇ 16ರಂದು 2.15 ಗಂಟೆ ಕಾಲ ನಿಯಂತ್ರಿಸಲಾಗುವುದು.

ನಂ. 16630 ಮಂಗಳೂರು ಸೆಂಟ್ರಲ್‌ – ತಿರುವನಂತಪುರ ಸೆಂಟ್ರಲ್‌ ಎಕ್ಸ್‌ಪ್ರೆಸ್ಸನ್ನು ಮೇ 16 ರಂದು 1.30 ಗಂಟೆ, ನಂ. 12283 ಎರ್ನಾಕುಲಂ ನಿಜಾಮುದ್ದೀನ್‌ ವೀಕ್ಲಿ ದುರಂತೊ ಎಕ್ಸ್‌ಪ್ರೆಸ್‌ನ್ನು ಮೇ 16ರಂದು 30 ನಿಮಿಷ, ನಂ. 16312 ಕೊಚ್ಚುವೇಲಿ ಶ್ರೀಗಂಗಾ ನಗರ ಸಾಪ್ತಾಹಿಕ ರೈಲನ್ನು ಮೇ 16ರಂದು 20 ನಿಮಿಷ ತಡೆಯಲಾಗುವುದು.

Advertisement

ನಂ. 12431 ತಿರುವನಂತಪುರ ಸೆಂಟ್ರಲ್‌ – ಹಝರತ್‌ ನಿಜಾಮುದ್ದೀನ್‌ ರಾಜಧಾನಿ ಎಕ್ಸ್‌ಪ್ರೆಸ್ಸನ್ನು ಮೇ 16ರಂದು 45 ನಿಮಿಷ, ನಂ.22637 ಚೆನ್ನೈ ಸೆಂಟ್ರಲ್‌ – ಮಂಗಳೂರು ಸೆಂಟ್ರಲ್‌ ವೆಸ್ಟ್‌ ಕೋಸ್ಟ್‌ ಎಕ್ಸ್‌ಪ್ರೆಸ್ಸನ್ನು ಮೇ 16ರಂದು 1.05 ಗಂಟೆ ಕಾಲ ತಡೆಹಿಡಿಯಲಾಗುವುದು.

ಮೇ 18ರಂದು ನಂ.19259 ಕೊಚ್ಚು ವೇಲಿ ಭಾವನಗರ ವೀಕ್ಲಿ ಎಕ್ಸ್‌ಪ್ರೆಸ್‌ ರೈಲನ್ನು 2.10 ಗಂಟೆ, 22637 ಚೆನ್ನೈ ಸೆಂಟ್ರಲ್‌ – ಮಂಗಳೂರು ಸೆಂಟ್ರಲ್‌ ವೆಸ್ಟ್‌ಕೋಸ್ಟ್‌ ಎಕ್ಸ್‌ಪ್ರೆಸ್ಸನ್ನು 1 ಗಂಟೆ, ಮೇ 21ನ್ನು ಅದೇ ರೈಲನ್ನು 1.30 ಗಂಟೆ, ಮೇ 22ರಂದು 2.30 ಗಂಟೆ ಕಾಲ ನಿಯಂತ್ರಿಸಲಾಗುವುದು.

ನಂ. 12224 ಎರ್ನಾಕುಲಂ ಜಂಕ್ಷನ್‌ ಲೋಕಮಾನ್ಯ ತಿಲಕ್‌ ವೀಕ್ಲಿ ಎಕ್ಸ್‌ ಪ್ರಸ್ಸನ್ನು ಮೇ 21ರಂದು 2.20 ಗಂಟೆ, ನಂ. 10215 ಮಡಗಾಂವ್‌ ಜಂಕ್ಷನ್‌ – ಎರ್ನಾಕುಲಂ ಸೂಪರ್‌
ಫಾಸ್ಟ್‌ ರೈಲನ್ನು ಮೇ 21, 28ರಂದು 45 ನಿಮಿಷ, ನಂ. 22660 ಯೋಗ ನಗರಿ ಹೃಷಿಕೇಷ್‌ ಕೊಚ್ಚುವೇಲಿ ಎಕ್ಸ್‌ಪ್ರೆಸ್ಸನ್ನು 45 ನಿಮಿಷ ಮೇ 25ರಂದು ನಿಯಂತ್ರಿ ಸಲಾಗುವುದು.

ಮೇ 22ರಂದು ನಂ. 12685 ಚೆನ್ನೈ ಸೆಂಟ್ರಲ್‌- ಮಂಗಳೂರು ಸೆಂಟ್ರಲ್‌ ರೈಲನ್ನು 60 ನಿಮಿಷ ಕಾಲ ನಿಯಂತ್ರಿ ಸಲಾಗುವುದು. ನಂ. 16604 ತಿರುವನಂತಪುರ ಸೆಂಟ್ರಲ್‌- ಮಂಗಳೂರು ಸೆಂಟ್ರಲ್‌ ಮಾವೇಲಿ ಎಕ್ಸ್‌ಪ್ರೆಸ್‌ ರೈಲನ್ನು 45 ನಿಮಿಷ ಕಾಲ ನಿಯಂತ್ರಿಸಲಾಗುವುದು.

ನಂ. 12511 ಗೋರಖ್‌ಪುರ ಜಂಕ್ಷನ್‌ ಕೊಚ್ಚುವೇಲಿ ಟ್ರೈ ವೀಕ್ಲಿ ಎಕ್ಸ್‌ ಪ್ರಸ್‌ ರೈಲನ್ನು ಮೇ 17, 24ರಂದು 45 ನಿಮಿಷ ನಿಯಂತ್ರಿಸಲಾಗುವುದು.

ಮಾಹಿತಿಗೆ ನ್ಯಾಶನಲ್‌ ಟ್ರೈನ್‌ ಎನ್‌ಕ್ವಯರಿ ಸಿಸ್ಟಂ ವೆಬ್‌ಸೈಟ್‌ / ಸಹಾಯ ವಾಣಿ 139 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next