ಅರಂತೋಡು : ಸುಳ್ಯದಿಂದ ರೋಗಿಯೊಬ್ಬರನ್ನು ಬೆಂಗಳೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಕೆ.ವಿ.ಜಿ. ಮಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಆಂಬ್ಯುಲೆನ್ಸ್ ಹಾಗೂ ಸುಳ್ಯಕ್ಕೆ ಬರುತ್ತಿದ್ದ ಐರಾವತ ಬಸ್ ಮಧ್ಯೆ ಸುಳ್ಯ ಸಮೀಪದ ಪಾಲಡ್ಕದಲ್ಲಿ ಅಪಘಾತವಾದ ಘಟನೆ ಮಂಗಳವಾರ ವರದಿಯಾಗಿದೆ.
ಆಂಬ್ಯುಲೆನ್ಸ್ ನಲ್ಲಿ ಎದುರು ಕುಳಿತಿದ್ದ ಸ್ವಸ್ತಿಕ್ ಎಂಬ ಯುವಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಆಂಬ್ಯುಲೆನ್ಸ್ ನಲ್ಲಿದ್ದ ರೋಗಿಯನ್ನು ಬೇರೆ ಆಂಬ್ಯುಲೆನ್ಸ್ ನಲ್ಲಿ ಬೆಂಗಳೂರಿಗೆ ಕಳುಹಿಸಲಾಗಿದೆ. ಅಪಘಾತದ ತೀವ್ರತೆಗೆ ಅಂಬ್ಯುಲೆನ್ಸ್ ನಜ್ಜುಗುಜ್ಜಾಗಿದೆ.
ಇದನ್ನೂ ಓದಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ಗೆ ದಾಖಲೆ ಹಸ್ತಾಂತರಿಸಿದ ಮಮತಾ ಬ್ಯಾನರ್ಜಿ