Advertisement

ಪಾಕ್‌ ಆಡಳಿತಾತ್ಮಕ ಹುದ್ದೆಗೆ ಮೊದಲ ಹಿಂದೂ ಮಹಿಳೆ !

09:32 PM Feb 14, 2023 | Team Udayavani |

ಇಸ್ಲಾಮಾಬಾದ್‌ : ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಯುವತಿ, ಸನಾ ರಾಮಚಂದ್‌ ಗುಲ್ವಾನಿ ಅವರನ್ನು, ಪಂಜಾಬ್‌ ಪ್ರಾಂತ್ಯದ ಹಸನಾಬ್ದಲ್‌ನ ಸಹಾಯಕ ಆಯುಕ್ತರು ಹಾಗೂ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.

Advertisement

ಈ ಮೂಲಕ ಪಾಕಿಸ್ತಾನ ಆಡಳಿತಾತ್ಮಕ ಸೇವೆ (ಪಿಎಎಸ್‌)ಗೆ ಸೇರ್ಪಡೆಗೊಂಡ ಹಿಂದೂ ಸಮುದಾಯದ ಮೊದಲ ಸಹಾಯಕ ಆಯುಕ್ತರೆಂಬ ಖ್ಯಾತಿಗೆ ಸನಾ ಪಾತ್ರರಾಗಿದ್ದಾರೆ.

ಸಿಂಧ್‌ ಪ್ರಾಂತ್ಯದ ಶಿಕಾರ್‌ಪುರ ಮೂಲದವರಾದ ಸನಾ, 2020ರಲ್ಲಿ ಕೇಂದ್ರ ಉನ್ನತ ಸೇವೆ (ಸಿಎಸ್‌ಎಸ್‌) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಕಳೆದವಾರವಷ್ಟೆ ಹಸನಾಬ್ದಲ್‌ನ ಸಹಾಯಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ದಿ ಡಾನ್‌ ಪತ್ರಿಕೆ ವರದಿ ಮಾಡಿದೆ.

ಅಲ್ಲದೆ, ಸನಾ ತಮ್ಮ ಮೊದಲ ಪ್ರಯತ್ನದಲ್ಲೇ ಸಿಎಸ್‌ಎಸ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next