Advertisement

ಬಾಹ್ಯಾಕಾಶದಲ್ಲಿ ಲೆಕ್ಕಕ್ಕಿಲ್ಲ ಪಾಕ್‌

12:30 AM Mar 01, 2019 | |

ಪ್ರತ್ಯೇಕ ರಾಷ್ಟ್ರವಾದ ದಿನದಿಂದಲೇ ಪಾಕಿಸ್ಥಾನ ಭಾರತದ ಜತೆಗೆ ವಿನಾಕಾರಣ ಸ್ಪರ್ಧೆಗೆ ಬಿದ್ದಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕೂಡ ಅಷ್ಟೆ, 1961ರಲ್ಲಿ ಏಷ್ಯಾದಲ್ಲಿಯೇ ಮೊದಲ ಬಾರಿಗೆ ಪಾಕಿಸ್ಥಾನ ದ ಆಗಿನ ಜನಪ್ರಿಯ ಭೌತ ವಿಜ್ಞಾನಿ ಅಬ್ದುಸ್‌ ಸಲಾಂ ಅವರು ಅಧ್ಯಕ್ಷ ಅಯೂಬ್‌ ಖಾನ್‌ರ ಮನವೊಲಿಸಿ ಕರಾಚಿಯಲ್ಲಿ ಸ್ಪೇಸ್‌ ಆ್ಯಂಡ್‌ ಅಟ್ಟ್ಮಾಸ್ಪಿಯರ್‌ ರಿಸರ್ಚ್‌ ಕಮಿಷನ್‌ (ಸುಪಾರ್ಕೊ) ಸ್ಥಾಪಿಸುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಸಲಾಂ ನೇತೃತ್ವದಲ್ಲಿ ಎಲ್ಲವೂ ಚೆನ್ನಾಗಿ ನಡೆದರೂ, ನಂತರದ ವರ್ಷಗಳಲ್ಲಿ ಸುಪಾರ್ಕೋಗೆ ಸರಕಾರದಿಂದ ನಿರೀಕ್ಷಿತ ಪ್ರೋತ್ಸಾಹ ಸಿಗಲಿಲ್ಲ. 

Advertisement

1969ರ ಆ.15ರಂದು ಇಸ್ರೋವನ್ನು ಭಾರತ ಸರಕಾರ ಶುರು ಮಾಡಿತು. ಅನಂತರ ನಡೆದದ್ದೇ ಬೇರೆ. ತೀರಾ ಇತ್ತೀಚೆಗೆ ಭಾರತದ ಇಸ್ರೋ ಒಂದೇ ಬಾರಿಗೆ 104 ಸ್ಯಾಟಲೈಟ್‌ಗಳನ್ನು ನಭಕ್ಕೆ ಉಡಾಯಿಸಿ ವಿಶ್ವದಾಖಲೆಯನ್ನೇ ಬರೆಯಿತು. ಅದಕ್ಕೆ ಎದುರಾಗಿ ಪಾಕಿಸ್ಥಾನ ದ ಬಾಹ್ಯಾಕಾಶ ಸಂಸ್ಥೆ ಸುಪಾರ್ಕೋಗೆ ಒಂದೇ ಒಂದು ಆಧುನಿಕ ಉಪಗ್ರಹ ಉಡಾಯಿಸಲು ಸಾಧ್ಯವಾಗಲಿಲ್ಲ ಎಂದು ಗಮನಾರ್ಹ.   ಚಂದ್ರ ಮತ್ತು ಮಂಗಳನ ಅಧ್ಯಯನ ಕೈಗೊಂಡಿರುವ ಇಸ್ರೋ ಈಗ ಶುಕ್ರ ಗ್ರಹದ ಅಧ್ಯಯನದ ಗುರಿ ಹೊಂದಿದೆ. 

ದಕ್ಷಿಣ ಏಷ್ಯಾದ ಹಳೆಯ ಬಾಹ್ಯಾಕಾಶ ಸಂಸ್ಥೆಗೆ ಏನಾಯಿತು ಎಂದು ಕೇಳಿದರೆ ಉತ್ತರ ಸ್ಪಷ್ಟವಾಗಿ ಯೇ ದೊರೆಯುತ್ತದೆ. ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಪಾಕಿಸ್ಥಾನ  ಸರಕಾರದ ವತಿಯಿಂದ ಅತ್ಯಲ್ಪ ಕೊಡುಗೆ ಮತ್ತು ಪ್ರೋತ್ಸಾಹ, ಮಿಲಿಟರಿ ಕ್ಷೇತ್ರವನ್ನೇ ಆದ್ಯತೆಯಾಗಿ ಪರಿಣಮಿಸಿದ್ದರಿಂದ ಸಂಶೋಧನಾ ಕ್ಷೇತ್ರ ಹಿಂದುಳಿಯಿತು. 

ಪಾಕಿಸ್ಥಾನ ದ ಸುಪಾರ್ಕೋದ ನಿಜವಾದ ಅಧಃಪತನ ಆದದ್ದು 1980 ರಿಂದ 1990ರ ಅವಧಿಯಲ್ಲಿ. ಆಗಿನ ಅಧ್ಯಕ್ಷ ಜಿಯಾ-ಉಲ್‌-ಹಕ್‌ ಸಂಸ್ಥೆಗೆ ನೀಡುತ್ತಿದ್ದ ಅನುದಾನದಲ್ಲಿ ಭಾರಿ ಕಡಿತ ಮಾಡಿದರು. ಹೀಗಾಗಿ ಸಂಪರ್ಕ ಕ್ಷೇತ್ರದ ಉಪಗ್ರಹ ಯೋಜನೆಯೂ ತಾಂತ್ರಿಕವಾಗಿ ಹಿಂದುಳಿಯಿತು.  

ಸೇನೆಯ ಅಧಿಕಾರಿಗಳು ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತರು.  ಸಂಶೋಧನೆ ಬದಲು ಭಾರತದ ವಿರುದ್ಧ ಸಂಚು ರೂಪಿಸುವ ಕೇಂದ್ರವಾಗಿ ಸುಪಾರ್ಕೋ ಬದಲಾಯಿತು. ಜತೆಗೆ ಅಬ್ದುಸ್‌ ಸಲಾಂರನ್ನು ನಿರ್ಲಕ್ಷಿಸಲಾಯಿತು. ಯುದ್ಧ,  ಶಸ್ತ್ರಾಸ್ತ್ರಗಳೇ ಆದ್ಯತೆ ಎಂಬ ನಿಲುವಿಂದ ಪಾಕಿಸ್ಥಾನ ದ ಸಂಸ್ಥೆ ಬಡವಾಯಿತು. ಆದರೆ ಇಸ್ರೋ ಸಂಪರ್ಕ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಉಪಗ್ರಹ ಗಳನ್ನು ಉಡಾಯಿಸಿತು. ಜತೆಗೆ ಆ ತಂತ್ರಜ್ಞಾನವನ್ನು ಇತರ ದೇಶಗಳಿಗೂ ಹಂಚಲು ಆರಂಭಿಸಿತು. 

Advertisement

ಸುಪಾರ್ಕೋ ಹಾಲಿ ಅಧ್ಯಕ್ಷ, ನಿವೃತ್ತ ಸೇನಾಧಿಕಾರಿ ಖಾಸಿರ್‌ ಅನೀಸ್‌ ಖುರುಮ್‌ ಪ್ರಕಾರ ಹಲವು ಯೋಜನೆಯಲ್ಲಿ ಹಿನ್ನಡೆಯಾಗಿದೆ. ಅಮೆರಿಕದಿಂದ ಭೋಗ್ಯಕ್ಕೆ ಪಡೆದ ಉಪಗ್ರಹವನ್ನು 2011ರಲ್ಲಿ ನಭಕ್ಕೆ ಕಳುಹಿಸಲಾಗಿತ್ತು. ಇದೀಗ ಅದು 2040ರ ಒಳಗಾಗಿ ತನ್ನದೇ ಆಗಿರುವ ಬಾಹ್ಯಾಕಾಶ ತಂತ್ರಜ್ಞಾನ ಹೊಂದಿ, ಉಪಗ್ರಹ ಹೊಂದಲು ಮುಂದಾಗಿದೆ. ಹೀಗಾಗಿಯೇ ಐಎಎಫ್ ವಿಮಾನಗಳು ರಾತ್ರಿ ದಾಳಿ ನಡೆಸಿದ ವೇಳೆ ಸೂಕ್ತ ಪ್ರತ್ಯುತ್ತರ ನೀಡಲು ಸಾಧ್ಯವಾಗಿಲ್ಲ ಎಂದು ಅಲ್ಲಿನ ರಕ್ಷಣಾ ಸಚಿವರು ಹೇಳಿ ನಗೆಪಾಟಲಿಗೆ ಈಡಾಗಿದ್ದು, ಅಲ್ಲಿಯ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರ ಎಷ್ಟು ಹಿಂದುಳಿದಿದೆ ಎನ್ನುವುದನ್ನು ಸೂಚಿಸುತ್ತದೆ.  

8 ವರ್ಷ ಮೊದಲು ದಕ್ಷಿಣ ಏಷ್ಯಾದಲ್ಲಿ ಉಪಗ್ರಹ ಉಡಾಯಿಸಿದ್ದರೂ, ಅನಂತರ ಮುಗ್ಗರಿಸಿದ ರಾಷ್ಟ್ರ 
ಇಸ್ರೋ ಸ್ಥಾಪಿಸಿದೆ ಹಲವು ದಾಖಲೆಗಳು

Advertisement

Udayavani is now on Telegram. Click here to join our channel and stay updated with the latest news.

Next