Advertisement

ಪಾಕ್‌ ಮದರಸಾ ಮೇಲೆ ತಾಲಿಬಾನ್‌ ಧ್ವಜ!

11:15 AM Sep 20, 2021 | Nagendra Trasi |

ಇಸ್ಲಾಮಾಬಾದ್‌/ಕಾಬೂಲ್‌: ಪಾಕಿಸ್ತಾನದ ಮಸೀದಿಯ ಮೇಲೆ ತಾಲಿಬಾನಿ ಧ್ವಜ ಹಾರಿಸಿದ ಘಟನೆ ವರದಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಸ್ಲಾಮಾಬಾದ್‌ನ ಜಾಮಿಯಾ ಹಫ್ಸಾ ಮಹಿಳಾ ಮದರಸಾ ಮೇಲೆ ತಾಲಿಬಾನ್‌ ಧ್ವಜ ಹಾರಿಸಲಾಗಿದೆ.

Advertisement

ಇದನ್ನೂ ಓದಿ:ದೇಗುಲ ತೆರವು ತಡೆಗೆ ಪ್ರತ್ಯೇಕ ವಿಧೇಯಕ ಮಂಡನೆಗೆ ಸರ್ಕಾರದ ನಿರ್ಧಾರ

ಮಸೀದಿಯೊಳಗೆ ಪ್ರಸಿದ್ಧ ಲಾಲ್‌ ಮಸೀದಿಯ ಧರ್ಮ ಗುರು ಮೌಲಾನಾ ಅಬ್ದುಲ್‌ ಅಜೀಜ್‌, ಕೆಲವು ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರಿದ್ದು, ಅವರೆಲ್ಲರೂ ಪೊಲೀಸರಿಗೆ ಬೆದರಿಕೆ ಹಾಕಿ ದ್ದಾರೆ. ಮೌಲಾನಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತ ಮದರಸಾದೊಳಗೆ ಶಸ್ತ್ರಾಸ್ತ್ರಗಳನ್ನೂ ಇಟ್ಟುಕೊಂಡಿದ್ದ ಎನ್ನಲಾಗಿದೆ.

ವಿದ್ಯಾರ್ಥಿಗಳಿಂದ ವಿರೋಧ: ಇನ್ನೊಂದೆಡೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತವು ಬಾಲಕರ ಶಾಲಾ ಕಾಲೇಜುಗಳನ್ನು ಮಾತ್ರ ತೆರೆಯಲು ಆದೇಶಿಸಿದ್ದು, ಪುರುಷ ಉಪನ್ಯಾಸಕರು ಮಾತ್ರವೇ ಪಾಠ ಮಾಡಬೇಕೆನ್ನುವ ನಿಯಮ ಜಾರಿ ಮಾಡಿದ್ದಾರೆ.

ಈ ಅಸಮಾನತೆ ಬಗ್ಗೆ ವಿದ್ಯಾರ್ಥಿಗಳೇ ಬೇಸರ ವ್ಯಕ್ತಪಡಿಸಿದ್ದಾರೆ. “ಹೆಣ್ಣು ಮಕ್ಕಳು ಈ ಸಮಾಜದ ಅರ್ಧ ಭಾಗ. ಅವರಿಗೆ ಶಿಕ್ಷಣಕ್ಕೆ ಅವಕಾಶ ಸಿಗುವವರೆಗೂ, ಅವರು ಶಾಲೆಗೆ ಮರಳುವವರೆಗೂ ನಾವೂ ಶಾಲೆ, ಕಾಲೇಜಿಗೆ ಹೋಗುವುದಿಲ್ಲ’ ಎಂದು ಅನೇಕ ವಿದ್ಯಾರ್ಥಿಗಳು ಪಟ್ಟು ಹಿಡಿದು ಕುಳಿತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next