ಇಸ್ಲಾಮಾಬಾದ್: ಹೈ ಟೆನ್ಷನ್ ಟ್ರಾನ್ಸ್‌ಮಿಷನ್ ಲೈನ್ ವೈಫಲ್ಯದ ಕಾರಣ ಸೋಮವಾರದಿಂದ ಪಾಕಿಸ್ತಾನದ ಹಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ.
Advertisement
ಸೋಮವಾರ ಬೆಳಗ್ಗೆ 7.30ರ ಸುಮಾರಿಗೆ ಗ್ರಿಡ್ ಸ್ಟೇಷನ್‌ಗಳಲ್ಲಿನ ವೈಫಲ್ಯದ ಕಾರಣ ಕರಾಚಿಯ ಶೇ.40ರಷ್ಟು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ.
ಇದೇ ರೀತಿ ಅನೇಕ ನಗರಗಳಲ್ಲಿ ಕರೆಂಟ್ ಕೈಕೊಟ್ಟಿದೆ. ಜನವರಿಯಲ್ಲಿ ಇಂಧನ ಸರಬರಾಜು ಕೊರತೆಯಿಂದ ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಬಹುತೇಕ ಇಡೀ ದೇಶವು ಅನೇಕ ದಿನಗಳ ಕಾಲ ಕತ್ತಲೆಯಲ್ಲಿ ಮುಳುಗಿತ್ತು.