ಲಾಹೋರ್: ಕಾರ್ಗಿಲ್ ದುಸ್ಸಾಹಸವನ್ನು ವಿರೋಧಿಸಿದ್ದಕ್ಕಾಗಿ, ಭಾರತ ಮತ್ತು ಇತರ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವ ಮಹತ್ವವನ್ನು ಒತ್ತಿಹೇಳಿದ್ದಕ್ಕಾಗಿ ನನ್ನನ್ನು 1999 ರಲ್ಲಿ ಜನರಲ್ ಪರ್ವೇಜ್ ಮುಷರಫ್(ದಿವಂಗತ) ಅವರು ಸರಕಾರದಿಂದ ಹೊರಹಾಕಿದ್ದರು ಎಂದು ಪಾಕಿಸ್ಥಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಶನಿವಾರ ಹೇಳಿದ್ದಾರೆ.
ಪಾಕಿಸ್ಥಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಸರ್ವೋಚ್ಚ ನಾಯಕ ಅವರು ಷರೀಫ್ ಅವರು ಮುಂಬರುವ ಚುನಾವಣೆಗೆ ತಮ್ಮ ಪಕ್ಷದ ಟಿಕೆಟ್‌ಗಳ ಆಕಾಂಕ್ಷಿಗಳೊಂದಿಗೆ ಮಾತನಾಡುವಾಗ, ”ಮೂರು ಬಾರಿ ಪ್ರಧಾನಿಯಾಗಿದ್ದ ನನ್ನನ್ನು ಅವಧಿಗೂ ಮುನ್ನವೇ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ್ದು ಏಕೆ” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Pakistan; ಭದ್ರತಾ ಪಡೆಗಳ ಗುಂಡಿಗೆ ಕನಿಷ್ಠ ಐವರು ವಾಂಟೆಡ್ ಉಗ್ರರು ಹತ
”1993 ಮತ್ತು 1999 ರಲ್ಲಿ ನನ್ನನ್ನು ಏಕೆ ಹೊರಹಾಕಲಾಯಿತು ಎಂದು ನನಗೆ ಹೇಳಬೇಕು. ನಾನು ಕಾರ್ಗಿಲ್ ಯೋಜನೆಯನ್ನು ವಿರೋಧಿಸಿ, ಅದು ಆಗಬಾರದು ಎಂದು ಹೇಳಿದಾಗ ನನ್ನನ್ನು ಹೊರಹಾಕಲಾಯಿತು. ನಂತರ ನಾನು ಹೇಳಿದ್ದು ಸರಿ ಎಂದು ಸಾಬೀತಾಯಿತು” ಎಂದರು.
”ನಾನುಪ್ರಧಾನಿಯಾಗಿದ್ದಾಗ ಮಾತ್ರ ಇಬ್ಬರು ಭಾರತದ ಪ್ರಧಾನಿಗಳು ಪಾಕಿಸ್ಥಾನಕ್ಕೆ ಭೇಟಿ ನೀಡಿದರು. ಮೋದಿ ಸಾಹಬ್ ಮತ್ತು ವಾಜಪೇಯಿ ಸಾಹಬ್ ಲಾಹೋರ್‌ಗೆ ಬಂದಿದ್ದರು” ಎಂದು ಮಾಜಿ ಪ್ರಧಾನಿ ಹೇಳಿದರು, ಭಾರತ ಮತ್ತು ಇತರ ನೆರೆಯ ದೇಶಗಳೊಂದಿಗೆ ಸುಧಾರಿತ ಸಂಬಂಧಗಳ ಕುರಿತು ಒತ್ತಿ ಹೇಳಿದರು.