ಕರಾಚಿ: ಆರ್ಥಿಕ ದುಃಸ್ಥಿತಿ ಎದುರಿಸುತ್ತಿರುವ ಪಾಕಿಸ್ಥಾನದಲ್ಲಿ ಅಮೆರಿಕನ್ ಡಾಲರ್ ಎದುರು ಪಾಕಿಸ್ಥಾನ ರೂಪಾಯಿ ತೀವ್ರ ಕುಸಿತ ಕಂಡಿದೆ. ಶುಕ್ರವಾರ ಡಾಲರ್ ಎದುರು ಪಾಕಿಸ್ಥಾನ ರೂಪಾಯಿ 262.6 ಆಗಿದೆ.
ಪಾಕಿಸ್ಥಾನ್ ಸ್ಟೇಟ್ ಬ್ಯಾಂಕ್ ಪ್ರಕಾರ, ಶುಕ್ರವಾರ ಒಂದು ಹಂತದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಡಾಲರ್ ಎದುರು ಪಾಕಿಸ್ಥಾನ ರೂಪಾಯಿ 265ಕ್ಕೆ ಹಾಗೂ ಇಂಟರ್ಬ್ಯಾಂಕ್ನಲ್ಲಿ 266 ಪಾಕಿಸ್ಥಾನ ರೂಪಾಯಿಗೆ ಕುಸಿದಿತ್ತು. ಅನಂತರ ಚೇತರಿಕೆ ಕಂಡು ಅಂತಿಮವಾಗಿ 262.6 ಪಾಕಿಸ್ಥಾನ ರೂಪಾಯಿಗೆ ಬಂದು ನಿಂತಿತು.
ಶುಕ್ರವಾರ ಮಾರುಕಟ್ಟೆ ಆರಂಭವಾದಗಲೇ 7.17 ಪಾಕಿಸ್ಥಾನ ರೂಪಾಯಿ ಅಥವಾ ಶೇ. 2.73ಕ್ಕೆ ಕುಸಿಯಿತು. ಒಟ್ಟಾರೆ ಗುರುವಾರದಿಂದ ಶುಕ್ರವಾರಕ್ಕೆ ಡಾಲರ್ ಎದುರು ಪಾಕಿಸ್ಥಾನ ರೂಪಾಯಿ 34 ರೂ. ಕುಸಿಯಿತು. ಸ್ಥಗಿತಗೊಂಡಿ ರುವ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸಾಲವನ್ನು ಮತ್ತೆ ಪಡೆಯುವ ಉದ್ದೇಶದಿಂದ ಪಾಕ್ ಸರಕಾರ, ಡಾಲರ್- ಪಾಕ್ ರೂಪಾಯಿ ವಿನಿಮಯ ದರದ ಮೇಲಿದ್ದ ಮಿತಿಯನ್ನು ರದ್ದು ಮಾಡಿತ್ತು. ಇದರ ಬೆನ್ನಲ್ಲೇ ಪಾಕಿಸ್ಥಾನಿ ರೂಪಾಯಿ ದರವು ಪಾತಾಳಕ್ಕೆ ಕುಸಿಯಿತು.