Advertisement

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

10:14 AM Dec 25, 2024 | Team Udayavani |

ಇಸ್ಲಾಮಾಬಾದ್:‌ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ ಉ*ಗ್ರರ ನೆಲೆಗಳ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 30 ಜನರು ಸಾವ*ನ್ನಪ್ಪಿದ್ದು, ಉ*ಗ್ರರ ತರಬೇತಿ ಕೇಂದ್ರಗಳು ಧ್ವಂಸಗೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಪಾಕಿಸ್ತಾನ ಗಡಿಭಾಗದ ಸಮೀಪದ ಪರ್ವತಪ್ರದೇಶದ ಪಾಕ್ಟಿಕಾ ಪ್ರಾಂತ್ಯದಲ್ಲಿ ಪಾಕ್‌ ಸೇನೆ ಈ ಕಾರ್ಯಾಚರಣೆ ನಡೆಸಿರುವುದಾಗಿ ವರದಿ ವಿವರಿಸಿದೆ. ಈ ಬಾಂಬ್‌ ದಾಳಿಗೆ ಪಾಕಿಸ್ತಾನದ ವೈಮಾನಿಕ ಸೇನೆಯೇ ಕಾರಣ ಎಂದು ಮೂಲಗಳು ತಿಳಿಸಿರುವುದಾಗಿ ಎಎನ್‌ ಐ ವರದಿ ಮಾಡಿದೆ.

ಮಾಧ್ಯಮಗಳ ವರದಿ ಪ್ರಕಾರ, ವೈಮಾನಿಕ ದಾಳಿಯಲ್ಲಿ ಮುರ್ಗ್‌ ಬಜಾರ್‌ ಗ್ರಾಮದಲ್ಲಿ ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ. ಆದರೆ ವೈಮಾನಿಕ ದಾಳಿ ಬಗ್ಗೆ ಪಾಕ್‌ ಅಧಿಕಾರಿಗಳು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸ್ಥಳೀಯ ಮಾಧ್ಯಮದ ವರದಿಯಂತೆ, ಡಿಸೆಂಬರ್‌ 24ರಂದು ನಡೆದ ವೈಮಾನಿಕ ದಾಳಿಯಲ್ಲಿ ಸುಮಾರು ಏಳು ಗ್ರಾಮಗಳ ಜನರು ತತ್ತರಿಸಿ ಹೋಗಿದ್ದು, ಒಂದೇ ಕುಟುಂಬದ ಐವರು ಸಾವಿಗೀಡಾಗಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next