Advertisement

ಕಾಡ್ಗಿಚ್ಚಿ ನಲ್ಲೂ ಟಿಕ್ ಟಾಕ್ ಹುಚ್ಚು!; ಪಾಕಿಸ್ತಾನಿ ಮಹಿಳೆಯ ವಿರುದ್ಧ ಆಕ್ರೋಶ

02:57 PM May 18, 2022 | Team Udayavani |

ಇಸ್ಲಾಮಾಬಾದ್: ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಪಾಕಿಸ್ತಾನದ ಜನಪ್ರಿಯ ಸಾಮಾಜಿಕ ಮಾಧ್ಯಮ ಮಹಿಳೆಯೊಬ್ಬಳು ಕಾಡ್ಗಿಚ್ಚಿನ ಬೆಂಕಿಯ ಮುನ್ನೆಲೆಯಲ್ಲಿ ಟಿಕ್‌ಟಾಕ್ ವಿಡಿಯೋಗೆ ಪೋಸ್ ನೀಡಿ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದ್ದಾರೆ.

Advertisement

ಇಂಟರ್ನೆಟ್‌ನಲ್ಲಿ ವೈರಲ್ ಆಗಿರುವ 15 ಸೆಕೆಂಡುಗಳ ವೀಡಿಯೊದಲ್ಲಿ, ಟಿಕ್‌ಟಾಕರ್ ಹುಮೈರಾ ಅಸ್ಗರ್ ಉರಿಯುತ್ತಿರುವ ಬೆಟ್ಟದ ಮುಂದೆ ಗೌನ್‌ನಲ್ಲಿ ತಮಾಷೆಯಾಗಿ ನಡೆಯುವುದನ್ನು ಕಾಣಬಹುದು. “ನಾನು ಎಲ್ಲಿದ್ದರೂ ಬೆಂಕಿ ಹೊತ್ತಿಕೊಳ್ಳುತ್ತದೆ.” ಎಂದು ಹೇಳಿಕೊಂಡಿದ್ದಾರೆ.

ವಿಡಿಯೋ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಹುಮೈರಾ, ”ನಾನು ಬೆಂಕಿ ಹಚ್ಚಲಿಲ್ಲ, ವೀಡಿಯೊಗಳನ್ನು ಮಾಡುವುದರಿಂದ ಯಾವುದೇ ಹಾನಿ ಇಲ್ಲ” ಎಂದು ಸಹಾಯಕರೊಬ್ಬರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : ಎಲ್ಲಾ ಹುದ್ದೆಗೆ ಹಾರ್ದಿಕ್ ರಾಜೀನಾಮೆ;ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆ

Advertisement

Udayavani is now on Telegram. Click here to join our channel and stay updated with the latest news.

Next