Advertisement

ಪಾಕಿಸ್ಥಾನ ರೆಸ್ಟೋರೆಂಟ್‌ಗೆ ನಟಿ ಆಲಿಯಾ ಭಟ್‌ ಜಾಹೀರಾತು

08:30 AM Jun 19, 2022 | Team Udayavani |

ಪಾಕಿಸ್ಥಾನದ ಕರಾಚಿಯಲ್ಲಿರುವ “ಸ್ವಿಂಗ್‌’ ಹೆಸರಿನ ರೆಸ್ಟೋರೆಂಟ್‌ ಬಾಲಿವುಡ್‌ ಸಿನೆಮಾವೊಂದನ್ನು ತನ್ನ ಜಾಹೀರಾತಿಗೆ ಬಳಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಮೆನ್ಸ್‌ ಮಂಡೇ ಸ್ಪೆಷಲ್‌ ಆಫ‌ರ್‌ನ ಜಾಹೀರಾತಿಗೆ ನಟಿ ಆಲಿಯಾ ಭಟ್‌ ಅಭಿನಯಿಸಿರುವ “ಗಂಗೂಭಾಯಿ ಕಥಿಯಾವಾಡಿ’ ಸಿನೆಮಾದ ದೃಶ್ಯವೊಂದನ್ನು ಬಳಸಿಕೊಳ್ಳಲಾಗಿದೆ.

ಅದರಲ್ಲಿ ವೇಶ್ಯೆ ಪಾತ್ರದಲ್ಲಿರುವ ನಟಿ, ಪುರುಷರನ್ನು ಕರೆಯುವ ದೃಶ್ಯವಿದೆ. ಈ ಭಾವನಾತ್ಮಕ ದೃಶ್ಯವನ್ನು ತನ್ನ ಲಾಭಕ್ಕೆ ಬಳಸಿಕೊಂಡ ರೆಸ್ಟೋರೆಂಟ್‌ ವಿರುದ್ಧ ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಲಾರಂಭಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next