ಬೆನೋನಿ: ಅಂಡರ್-19 ವನಿತಾ ಟಿ20 ವಿಶ್ವಕಪ್ ಕೂಟದ ರವಿವಾರದ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್, ಪಾಕಿಸ್ಥಾನ, ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಜಯ ಸಾಧಿಸಿವೆ.
ವೆಸ್ಟ್ ಇಂಡೀಸ್ 7 ರನ್ನುಗಳಿಂದ ಐರ್ಲೆಂಡ್ಗೆ ಸೋಲುಣಿಸಿತು. ಪಾಕಿ ಸ್ಥಾನ 8 ವಿಕೆಟ್ ಅಂತರದಿಂದ ರವಾಂಡ ವನ್ನು ಪರಾಭವಗೊಳಿಸಿತು. ಇಂಗ್ಲೆಂಡ್ ಹುಡುಗಿಯರದು ಭರ್ಜರಿ ಗೆಲುವು. ಅವರು 174 ರನ್ ಅಂತರದಿಂದ ಜಿಂಬಾಬ್ವೆಯನ್ನು ಕೆಡವಿದರು. ನ್ಯೂಜಿಲ್ಯಾಂಡ್ 10 ವಿಕೆಟ್ಗಳಿಂದ ಇಂಡೋನೇಷ್ಯಾವನ್ನು ಮಣಿಸಿತು.
ಗೆಲುವಿನ ಉತ್ಸಾಹದಲ್ಲಿ ಭಾರತ
ಸೋಮವಾರ ಭಾರತ ತಂಡ ಯುಎಇ ವಿರುದ್ಧ ಆಡಲಿದೆ. ಆತಿ ಥೇಯ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್ ಗಳಿಂದ ಪರಾಭವಗೊಳಿಸಿದ ಹುಮ್ಮಸ್ಸಿ ನಲ್ಲಿರುವ ಶಫಾಲಿ ವರ್ಮ ಪಡೆ ಇದೇ ಲಯವನ್ನು ಕಾಯ್ದುಕೊಳ್ಳುವ ಉಮೇದಿ ನಲ್ಲಿದೆ. ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕಾದರೆ ಗ್ರೂಪ್ ಹಂತದಲ್ಲಿ ಅಗ್ರಸ್ಥಾನ ಪಡೆಯುವ ಅಗತ್ಯವಿದೆ.
ಶಫಾಲಿ ವರ್ಮ, ಅವರ ಜತೆಗಾರ್ತಿ ಶ್ವೇತಾ ಸೆಹ್ರಾವತ್ ದಕ್ಷಿಣ ಆಫ್ರಿಕಾ ವಿರುದ್ಧ ಸಖತ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಬ್ಯಾಟಿಂಗ್ ಟ್ರ್ಯಾಕ್ ಮೇಲೆ ಬೌಲರ್ಗಳಿಂದ ಮ್ಯಾಜಿಕ್ ನಡೆದಿರಲಿಲ್ಲ.
Related Articles
ಯುಎಇ ಕೂಡ ತನ್ನ ಮೊದಲ ಪಂದ್ಯವನ್ನು ಜಯಿಸಿದ್ದನ್ನು ಮರೆ ಯುವಂತಿಲ್ಲ. ಅದು ಸ್ಕಾಟ್ಲೆಂಡ್ಗೆ 6 ವಿಕೆಟ್ಗಳ ಸೋಲುಣಿಸಿತ್ತು.