Advertisement

ಉತ್ತರ ಪ್ರದೇಶದ ಗ್ರಾಮ ಪಂಚಾಯತ್ ಗೆ ಕರಾಚಿ ಮಹಿಳೆ ಅಧ್ಯಕ್ಷೆ

01:03 AM Jan 01, 2021 | Team Udayavani |

ಲಕ್ನೋ/ಕೊಟ್ಟಾಯಂ: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಗುಡೌ ಗ್ರಾ.ಪಂ.ಗೆ ಪಾಕಿಸ್ಥಾನದ ಕರಾಚಿಯ ಮಹಿಳೆ ಬಾನೋ ಬೇಗಂ ಮುಖ್ಯಸ್ಥೆಯಾಗಿರುವ ಅಂಶ ಬೆಳಕಿಗೆ ಬಂದಿದೆ. ಎಡವಟ್ಟಿನಿಂದ ಎಚ್ಚೆತ್ತುಕೊಂಡಿ ರುವ ಜಿಲ್ಲಾ ಪಂಚಾಯತ್‌ರಾಜ್‌ ಅಧಿಕಾರಿ ಆಕೆಯ ವಿರುದ್ಧ ಎಫ್ಐಆರ್‌ ದಾಖಲಿಸಲು ಆದೇಶ ನೀಡಿದ್ದಾರೆ.

Advertisement

35 ವರ್ಷಗಳ ಹಿಂದೆ ಕರಾಚಿಯ ಬಾನೋ ಬೇಗಂ ಎಂಬವರು ಇಟಾವಾ ಜಿಲ್ಲೆಗೆ ಬಂಧುವಿನ ಮದುವೆಗೆ ಆಗಮಿಸಿದ್ದರು. ಬಳಿಕ ಆಕೆ ಇಲ್ಲಿಯೇ ಉಳಿದುಕೊಂಡಳು. ಅನಂತರ ಅವರು ಅಖ್ತರ್‌ ಅಲಿ ಎಂಬು ವರನ್ನು ವಿವಾಹ ವಾದರು. ಅನಂತರದ ವರ್ಷಗಳಲ್ಲಿ ಅವರು ಪಾಕಿಸ್ಥಾನದ ವೀಸಾವನ್ನು ಕಾಲ ಕಾಲಕ್ಕೆ ನವೀಕರಣ ಮಾಡಿ, ದೇಶದಲ್ಲಿಯೇ ವಾಸ್ತವ್ಯ ಹೂಡಿ ದ್ದಳು. 2015ರಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾಗವಹಿಸಿ ಗುಡೌ ಗ್ರಾ.ಪಂ.ನ ಸದಸ್ಯೆಯಾಗಿ ಆಯ್ಕೆ ಯಾ ದರು. ಗ್ರಾ.ಪಂ.ನ ಹಾಲಿ ಅಧ್ಯಕ್ಷ ನಿಧನ ರಾದ ಬಳಿಕ ಬಾನೋ ಆ ಹುದ್ದೆ ಯನ್ನೇರಿ ದ್ದಳು. ಪಾಕ್‌ ಮೂಲದವಳು ಎಂಬುದನ್ನು ಮರೆ ಮಾಚಿ ಆಕೆ ಗ್ರಾಮದಲ್ಲಿ ಗೌರವವನ್ನೂ ಸಂಪಾದಿಸಿದ್ದಳು. ಪಾಕಿಸ್ಥಾನದ ಮೂಲದ ಬಗ್ಗೆ ಮಾಹಿತಿ ಬಹಿರಂಗವಾಗುತ್ತಲೇ, ಹುದ್ದೆಗೆ ರಾಜೀನಾಮೆ ನೀಡಿದ್ದಳು.

ಡಿ.10ರಂದೇ ಸ್ಥಳೀಯರೊಬ್ಬರು ಈ ಬಗ್ಗೆ ಜಿ.ಪಂ. ಅಧಿಕಾರಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರ ಮೂಲಕ ತನಿಖೆ ನಡೆಸಿದಾಗ ವಿಚಾರ ಖಚಿತವಾಯಿತು. ನಿಯಮ ಮೀರಿ ಚುನಾ ವಣ ಆಯೋಗ ನೀಡುವ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಅನ್ನು ಪಡೆದುಕೊಂಡಿದ್ದಾಳೆ. ಆಕೆಗೆ ನೆರವಾದ ಎಲ್ಲರ ವಿರುದ್ಧವೂ ತನಿಖೆ ನಡೆಸಲು ಆದೇಶ ನೀಡಲಾಗಿದೆ.

21ರ ಯುವತಿ ಪಂಚಾಯತ್‌ ಅಧ್ಯಕ್ಷೆ
ಕೆಲವು ದಿನಗಳ ಹಿಂದಷ್ಟೇ 21 ವರ್ಷ ವಯಸ್ಸಿನ ಆರ್ಯ ರಾಜೇಂದ್ರನ್‌ ತಿರುವನಂತಪುರ ಮಹಾನಗರ ಪಾಲಿಕೆ ಮೇಯರ್‌ ಆಗಿ ಅಧಿಕಾರ ವಹಿಸಿದ್ದರು. ಇದೀಗ ಪತ್ತನಂತಿಟ್ಟ ಜಿಲ್ಲೆಯ ಅರುವಪ್ಪುಳಂ ಗ್ರಾ.ಪಂ.ನ ಅಧ್ಯಕ್ಷೆಯಾಗಿ 21 ವರ್ಷ ವಯಸ್ಸಿನ ರೇಷ್ಮಾ ಮರಿಯಾಂ ರಾಯ್‌ ಅಧಿಕಾರ ವಹಿಸಿಕೊಂಡಿದ್ದಾರೆ. ದೇಶದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಲ್ಲಿ ಅತ್ಯಂತ ಕಿರಿಯ ವಯ ಸ್ಸಿನವರು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next