Advertisement

ಎಫ್.ಎಟಿ.ಎಫ್. ಗ್ರೇ ಲಿಸ್ಟ್‌: ಗುರಿ ಮುಟ್ಟುವ ವಿಶ್ವಾಸ ವ್ಯಕ್ತಪಡಿಸಿದ ಪಾಕ್‌ ಸಚಿವ ಖುರೇಶಿ

09:44 AM Oct 21, 2019 | Team Udayavani |

ಇಸ್ಲಾಮಾಬಾದ್‌: ಉಗ್ರರಿಗೆ ಆರ್ಥಿಕ ನೆರವು ನೀಡುವುದನ್ನು ತಡೆಗಟ್ಟುವಲ್ಲಿ ಹಾಗೂ ಹಣ ಅಕ್ರಮ ವರ್ಗಾವಣೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಪಾಕಿಸ್ಥಾನವನ್ನು ಹಣಕಾಸು ಕಾರ್ಯಪಡೆ (ಎಫ್.ಎಟಿ.ಎಫ್.) ಗ್ರೇ ಪಟ್ಟಿಯಲ್ಲೇ ಉಳಿಸಿಕೊಂಡಿದ್ದು, ಇದರಿಂದ ಹೊರ ಬರಲು ಪಾಕ್‌ ಕಠಿನ ಕ್ರಮಗಳನ್ನು ಪಾಲಿಸಲಿದೆ ಎಂದು ಪಾಕ್‌ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಶಿ ಹೇಳಿದ್ದಾರೆ.

Advertisement

ಇದಕ್ಕಾಗಿ ತಮಗೆ ನೀಡಿರುವ ಗಡುವಿನೊಳಗೆ ಕಠಿನ ಕ್ರಮಗಳ ಮೂಲಕ ಗ್ರೇ ಲಿಸ್ಟ್‌ ನಿಂದ ಹೊರ ಬರಲು ಪ್ರಯತ್ನಿಸುವುದಾಗಿ ಸಚಿವ ಖುರೇಶಿ ಹೇಳಿದ್ದಾರೆ. ತಮ್ಮ ಗುರಿಯನ್ನು 2020ರ ಸುಮಾರಿಗೆ ನಾವು ತಲುಪಲಿದ್ದೇವೆ ಎಂಬ ವಿಶ್ವಾಸವನ್ನು ಖುರೇಶಿ ವ್ಯಕ್ತಪಡಿಸಿದ್ದಾರೆ. 2020ರ ಫೆಬ್ರವರಿ ಒಳಗೆ ಪಾಕ್‌ ಇದನ್ನು ಕೈಗೊಳ್ಳುವಲ್ಲಿ ವಿಫ‌ಲವಾದರೆ ಕಪ್ಪು ಪಟ್ಟಿಗೆ ಬೀಳಲಿದೆ. ಭಯೋತ್ಪಾದಕರ ನಿಗ್ರಹಕ್ಕಾಗಿ ರೂಪಿಸಿರುವ ಕಾರ್ಯಯೋಜನೆಯನ್ನು ಪಾಕಿಸ್ಥಾನ ಪೂರ್ಣಗೊಳಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಸಭೆಯಲ್ಲಿ ನೀಡಲಾಗಿತ್ತು.

ಭಾರತದಲ್ಲಿ ಸರಣಿ ದಾಳಿ ನಡೆಸಿರುವ ಲಷ್ಕರ್‌ ಎ ತೊಯ್ಬಾ ಮತ್ತು ಜೈಷ್‌ ಎ ಮೊಹಮ್ಮದ್‌ ಮೊದಲಾದ ಉಗ್ರ ಸಂಘಟನೆಗಳಿಗೆ ವಿವಿಧ ಮೂಲಗಳಿಂದ ಲಭಿಸುವ ಹಣಕಾಸಿನ ನೆರವನ್ನು ನಿಯಂತ್ರಿಸುವುದು ಸೇರಿದಂತೆ 27 ಕಾರ್ಯಯೋಜನೆಗಳನ್ನು ಪಾಕ್‌ ಗೆ ನೀಡಲಾಗಿತ್ತು. ಆದರೆ ಅವುಗಳ ಪೈಕಿ ಕೇವಲ ಐದನ್ನು ಮಾತ್ರ ನಿರ್ವಹಿಸಿದೆ ಎಂದು ಎಫ್.ಎಟಿ.ಎಫ್. ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next