Advertisement

ಏಷ್ಯಾ ಕಪ್‌ ಕ್ರಿಕೆಟ್‌: ಫೈನಲ್‌ ಸೆಣಸಾಟಕ್ಕೆ ಲಂಕಾ, ಪಾಕ್‌ ಸನ್ನದ್ಧ

10:30 PM Sep 10, 2022 | Team Udayavani |

ದುಬಾೖ: ಬಲಿಷ್ಠ ಭಾರತವನ್ನು ಲೀಗ್‌ ಹಂತದಲ್ಲಿ ಬಗ್ಗುಬಡಿದ ಪಾಕಿಸ್ಥಾನ ಮತ್ತು ಶ್ರೀಲಂಕಾ ತಂಡಗಳು ರವಿವಾರ ನಡೆಯುವ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ಪ್ರಶಸ್ತಿಗಾಗಿ ಪರಸ್ಪರ ಹೋರಾಡಲಿದೆ.

Advertisement

ಶುಕ್ರವಾರ ನಡೆದ ರಿಹರ್ಸಲ್‌ ಪಂದ್ಯವೆಂದು ಬಣ್ಣಿಸಲಾದ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎಲ್ಲ ವಿಭಾಗಗಳಲ್ಲಿಯೂ ಉರುಳಿಸಿದ ಶ್ರೀಲಂಕಾ ತಂಡವು ಫೈನಲ್‌ನಲ್ಲೂ ಇದೇ ಫ‌ಲಿತಾಂಶ ದಾಖಲಿಸುವ ಉತ್ಸಾಹದಲ್ಲಿದೆ.

ರಿಹರ್ಸಲ್‌ ಪಂದ್ಯದಲ್ಲಿ ಬೌಲರ್‌ಗಳೇ ಮೇಲುಗೈ ಸಾಧಿಸಿದ್ದರು. ಲಂಕಾ ಬೌಲರ್‌ಗಳ ಭರ್ಜರಿ ನಿರ್ವಹಣೆಯಿಂದಾಗಿ ಪಾಕಿಸ್ಥಾನ ಕೇವಲ 121 ರನ್‌ ಗಳಿಸಲು ಸಾಧ್ಯವಾಗಿದ್ದರೆ ಶ್ರೀಲಂಕಾ 17 ಓವರ್‌ಗಳಲ್ಲಿ ಐದು ವಿಕೆಟಿಗೆ 124 ರನ್‌ ಗಳಿಸಿ ಜಯಭೇರಿ ಬಾರಿಸಿತ್ತು. ಆದರೆ ಫೈನಲ್‌ನಲ್ಲಿ ಪಾಕಿಸ್ಥಾನ ಬಹಳಷ್ಟು ಎಚ್ಚರ ವಹಿಸಿ ಆಡುವ ಸಾಧ್ಯತೆಯಿದೆ. ಹೀಗಾಗಿ ಈ ಪಂದ್ಯ ತೀವ್ರ ಪೈಪೋಟಿದಿಂದ ಸಾಗುವ ನಿರೀಕ್ಷೆಯಿದೆ.

ಸಾಮಾಜಿಕ-ಆರ್ಥಿಕ ಬಿಕ್ಕಟ್ಟು ಮತ್ತು ತನ್ನ ದೇಶದ ಇತಿಹಾಸದಲ್ಲಿ ಅತ್ಯಂತ ಭೀಕರ ಪ್ರಕ್ಷುಬ್ಧತೆಯನ್ನು ಎದುರಿಸಿರುವ ಶ್ರೀಲಂಕಾ ಕ್ರಿಕೆಟ್‌ ತಂಡವು ಇದೀಗ ಅಮೋಘ ನಿರ್ವಹ ಣೆಯ ಮೂಲಕ ಫೈನಲಿ ಗೇರಿದ ಸಾಧನೆ ಮಾಡಿದೆ ಯಲ್ಲದೇ ರವಿವಾರದ ಫೈನ ಲ್‌ನಲ್ಲಿ ಪಾಕಿಸ್ಥಾನ ವನ್ನು ಸೋಲಿಸುವ ಮೂಲಕ ದ್ವೀಪ ರಾಷ್ಟ್ರಕ್ಕೆ ಭಾವನಾತ್ಮಕ ಬಿಡುಗಡೆ ನೀಡಲು ಬಯಸಿದೆ.

ಆರಂಭದ ವೇಳಾಪಟ್ಟಿಯಂತೆ ಶ್ರೀಲಂಕಾವು ಏಷ್ಯಾಕಪ್‌ನ ಆತಿಥ್ಯ ವಹಿಸಬೇಕಿತ್ತು. ಆದರೆ ಆರ್ಥಿಕ ಬಿಕ್ಕಟ್ಟಿ ನಿಂದಾಗಿ ಭದ್ರತಾ ಕಾರಣಗಳಿ ಗಾಗಿ ಈ ಕೂಟವನ್ನು ಕೊನೆ ಕ್ಷಣದಲ್ಲಿ ಯುಎಇಗೆ ಸ್ಥಳಾಂತರಿಸಬೇಕಾಯಿತು. ದುಬಾೖಯ ಅಭಿಮಾನಿಗಳಿಗೆ ಅಥವಾ ಏಷ್ಯನ್‌ ಕ್ರಿಕೆ‌ಟ್‌ ಕೌನ್ಸಿಲ್‌ಗೆ ಭಾರತ ಮತ್ತು ಪಾಕಿಸ್ಥಾನ ನಡುವೆ ಫೈನಲ್‌ ನಡೆಯಬೇಕಿತ್ತು ಎಂಬ ಬಯಕೆ ಯಿತ್ತು. ಆದರೆ ಲೀಗ್‌ ಹಂತದಲ್ಲಿ ಬಹಳ ಕಷ್ಟದಿಂದ ಸೂಪರ್‌ ಫೋರ್‌ ಹಂತಕ್ಕೇರಿದ್ದ ಶ್ರೀಲಂಕಾ ತಂಡ ಅಲ್ಲಿ ಅಮೋಘ ಆಟ ಪ್ರದರ್ಶಿಸಿ ಫೈನಲಿಗೇರಿತ್ತು. ಸೂಪರ್‌ ಫೋರ್‌ ಹಂತದಲ್ಲಿ ಶ್ರೀಲಂಕಾದ ಆಟವನ್ನು ಗಮನಿಸಿದರೆ ಫೈನಲ್‌ನಲ್ಲಿ ಬಾಬರ್‌ ಅಜಮ್‌ ತಂಡ ಸುಲಭದಲ್ಲಿ ಗೆಲ್ಲುವ ಸಾಧ್ಯತೆ ದೂರವೆಂದು ಹೇಳಬಹುದು.

Advertisement

ಆಕ್ರಮಣಕ್ಕೆ ಆದ್ಯತೆ
ಏಷ್ಯಾಕಪ್‌ನಲ್ಲಿ ಇಷ್ಟರವರೆಗೆ ಆಡಿದ ಪಂದ್ಯಗಳನ್ನು ಗಮನಿಸಿದರೆ ಶ್ರೀಲಂಕಾ ಆಟಗಾರರು ಆಕ್ರಮಣಕಾರಿ ಆಟಕ್ಕೆ ಹೆಚ್ಚಿನ ಆದ್ಯತೆ ನೀಡಿದಂತಿದೆ. ಲಂಕಾ ಆಟಗಾರರು 28 ಸಿಕ್ಸ್‌ ಮತ್ತು 62 ಸಿಕ್ಸರ್‌ ಬಾರಿಸಿರುವುದು ಅವರ ಆಟದ ವೈಖರಿಯನ್ನು ತಿಳಿಸುತ್ತದೆ. ಕುಸಲ್‌ ಮೆಂಡಿಸ್‌ ಮತ್ತು ಪಥುಮ್‌ ನಿಸ್ಸಾಂಕ ಈ ಕೂಟದಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದ್ದಾರೆ. ಶುಕ್ರವಾರದ ರಿಹರ್ಸಲ್‌ ಪಂದ್ಯದಲ್ಲಿ ನಿಸ್ಸಾಂಕ ಅಜೇಯ 55 ರನ್‌ ಗಳಿಸಿದ್ದರಿಂದ ತಂಡ ಗೆಲುವು ಕಾಣುವಂತಾಗಿತ್ತು. ಅವರಲ್ಲದೇ ದನುಷ್ಕ ಗುಣತಿಲಕ, ಭಾನುಕ ರಾಜಪಕ್ಷ ಮತ್ತು ನಾಯಕ ದಾಸುನ್‌ ಶನಕ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ.

ಬೌಲಿಂಗ್‌ನಲ್ಲಿಯೂ ಶ್ರೀಲಂಕಾ ಬಲಿಷ್ಠವಾಗಿದೆ. ರಿಹರ್ಸಲ್‌ ಪಂದ್ಯದಲ್ಲಿ ತಂಡದ ಬಿಗು ಬೌಲಿಂಗ್‌ನಿಂದಾಗಿ ಪಾಕಿಸ್ಥಾನ ತತ್ತರಿಸಿ ಹೋಗಿತ್ತು. ವನಿಂದು ಹಸರಂಗ, ಮಹೀಶ್‌ ತೀಕ್ಷಣ, ದಿಲ್ಶನ್‌ ಮಧುಶಂಕ ಎದುರಾಳಿಯನ್ನು ಕಟ್ಟಿ ಹಾಕಲು ಸಮರ್ಥರಿದ್ದಾರೆ.

ಪಾಕಿಗೆ ಬೌಲಿಂಗ್‌ ಶಕ್ತಿ
ಪಾಕಿಸ್ಥಾನದ ಬ್ಯಾಟಿಂಗ್‌ ಪರಿಣಾಮ ಕಾರಿಯಾಗಿಲ್ಲ. ಸ್ವತಃ ನಾಯ ಬಾಬರ್‌ ಅಜಮ್‌ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನು ಭವಿಸಿದ್ದಾರೆ. ಐದು ಪಂದ್ಯಗಳಿಂದ ಅವರು ಕೇವಲ 63 ರನ್‌ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಆದರೆ ಬೌಲಿಂಗ್‌ ವಿಭಾಗದಲ್ಲಿ ತಂಡದ ಶಕ್ತಿ ಅಡಗಿದೆ. ಶಾದಾಬ್‌ ಖಾನ್‌ ಮತ್ತು ಮೊಹಮ್ಮದ್‌ ನವಾಜ್‌ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಶಾದಾಬ್‌ 7 ಮತ್ತು ನವಾಜ್‌ 8 ವಿಕೆಟ್‌ ಕಿತ್ತು ಎದುರಾಳಿಗೆ ಸಿಂಹಸ್ವಪ್ನರಾಗಿದ್ದಾರೆ. ಅವರಲ್ಲದೇ ನಸೀಮ್‌ ಶಾ, ಹ್ಯಾರಿಸ್‌ ರಾಫ್ ಮತ್ತು ಮೊಹಮ್ಮದ್‌ ಹಸ್ನೆ„ನ್‌ ಕೂಡ ಮಿಂಚುತ್ತಿದ್ದಾರೆ.

ಟಾಸ್‌ ನಿರ್ಣಾಯಕ
ದುಬಾೖ ಪಿಚ್‌ನಲ್ಲಿ ಟಾಸ್‌ ನಿರ್ಣಾ ಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ಮೊದಲು ಬ್ಯಾಟಿಂಗ್‌ ಮಾಡಿದ ವೇಳೆ ಪಾಕಿಸ್ತಾನದ ಬ್ಯಾಟಿಂಗ್‌ ಅಷ್ಟೊಂದು ಉತ್ತಮವಾಗಿರಲಿಲ್ಲ. ಈ ಕೂಟದಲ್ಲಿ ಭಾರತ ಮತ್ತು ಶ್ರೀಲಂಕಾ ವಿರುದ್ಧ ಸೋತ ಸಂದರ್ಭದಲ್ಲಿ ಪಾಕಿಸ್ಥಾನ ಮೊದಲು ಬ್ಯಾಟಿಂಗ್‌ ನಡೆಸಿತ್ತು. ಪಾಕಿನ ಅಗ್ರ ಕ್ರಮಾಂಕದ ಆಟಗಾರರು ಬ್ಯಾಟಿಂಗ್‌ ವೈಫ‌ಲ್ಯ ಕಂಡಿರುವುದು ಇದಕ್ಕೆ ಕಾರಣವಾಗಿದೆ. ಈ ಕಾರಣದಿಂದ ಒಂದು ವೇಳೆ ಪಾಕಿಸ್ಥಾನ ಟಾಸ್‌ ಗೆದ್ದರೆ ಮೊದಲು ಫೀಲ್ಡಿಂಗ್‌ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ತಂಡಗಳು
ಶ್ರೀಲಂಕಾ:
ದಾಸುನ್‌ ಶನಕ (ನಾಯಕ), ದನುಷ್ಕ ಗುಣತಿಲಕ, ಪಥುಮ್‌ ನಿಸ್ಸಾಂಕ, ಕುಸಲ್‌ ಮೆಂಡಿಸ್‌, ಚರಿತ್‌ ಅಸಲಂಕ, ಭಾನುಕ ರಾಜಪಕ್ಷ, ಅಶೆನ್‌ ಬಂಡಾರ, ಧನಂಜಯ ಡಿಸಿಲ್ವ, ವನಿಂದು ಹಸರಂಗ, ಮಹೀಶ್‌ ತೀಕ್ಷಣ, ಜೆಫ್ರಿ ವಂಡರ್‌ಸೆ, ಪ್ರವೀಣ್‌ ಜಯವಿಕ್ರಮ, ಚಮಿಕ ಕರುಣರತ್ನೆ, ದಿಲ್ಶನ್‌ ಮಧುಶಂಕ, ಮಥೀಶ ಪತಿರಣ, ನುವನಿದು ಫೆರ್ನಾಂಡೊ, ದಿನೇಶ್‌ ಚಂಡಿಮಾಲ್‌.

ಪಾಕಿಸ್ಥಾನ:
ಬಾಬರ್‌ ಅಜಮ್‌ (ನಾಯಕ), ಶಾದಾಬ್‌ ಖಾನ್‌, ಆಸಿಫ್ ಅಲಿ, ಫ‌ಕರ್‌ ಜಮಾನ್‌, ಹೈದರ್‌ ಅಲಿ, ಹ್ಯಾರಿಸ್‌ ರಾಫ್, ಇಫ್ತಿಕಾರ್‌ ಅಹ್ಮದ್‌, ಖುಶಿಲ್‌ ಶಾ, ಮೊಹಮ್ಮದ್‌ ನವಾಜ್‌, ಮೊಹಮ್ಮದ್‌ ರಿಜ್ವಾನ್‌, ನಸೀಮ್‌ ಶಾ, ಶಾಹನವಾಜ್‌ ದಹನಿ, ಉಸ್ಮಾನ್‌ ಕಾದಿರ್‌, ಮೊಹಮ್ಮದ್‌ ಹಸ್ನೆ„ನ್‌, ಹಸನ್‌ ಅಲಿ.

ಫೈನಲ್‌
ಪಾಕಿಸ್ಥಾನ – ಶ್ರೀಲಂಕಾ
ಸ್ಥಳ: ದುಬಾೖ
ಆರಂಭ: 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next